ಹೈದರಾಬಾದ್. ನಕಲಿ ಇನ್ಸ್ಟಾ ಖಾತೆ ತೆರೆದು ವಂಚನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧನ ಮಾಡಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಸುಮಂತ್ ಮಣಿಕೊಂಡದಲ್ಲಿ ವಾಸವಾಗಿದ್ದ., ನಕಲಿ ಖಾತೆ ಮೂಲಕ ಪರಿಚಯ ಮಾಡಿಕೊಂಡು ಅನೇಕ ಯತಿಯರೊಂದಿಗೆ ಚಾಟ್ ಮಾಡಿದ್ದಾನೆ. ಅವರನ್ನು ಫ್ರೆಂಡ್ ಮಾಡಿಕೊಂಡು ಫೋಟೋ ಸಂಗ್ರಹಿಸಿ, ಬಳಿಕ ಅವರ ಅಶ್ಲೀಲ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಯುವತಿಯೊಬ್ಬಳ ಕೊಟ್ಟ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಸುಮಂತ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇತ ಈಗಾಗಲೇ 70 ಯುವತಿಯರಿಗೆ ಆತ ವಂಚನೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರು ಅಪರಿಚಿತರೊಂದಿಗೆ ಚಾಟ್ ಮಾಡದಂತೆ ಹೈದರಾಬಾದ್ ಸೈಬರ್ ಕ್ರೈಂ ಎಸಿಪಿ ಪ್ರಸಾದ್ ಸೂಚನೆ ಕೊಟ್ಟಿದ್ದಾರೆ.