2021 ರಲ್ಲಿ ಮೈಸೂರಿನಲ್ಲಿ (Mysore ) ಮಳೆ ಹಾನಿಯಾಗಿದೆ . ಕೆರೆ ಕಟ್ಟೆ ಒಡೆದು ವಸತಿ ಪ್ರದೇಶಗಳಲ್ಲಿ ತೊಂದರೆ ಆಗಿತ್ತು. 135 ಕೋಟಿ ವೆಚ್ಚದಲ್ಲಿ ಪರಿಹಾರ ಕಾರ್ಯಗಳ ಕುರಿತು ಪ್ರಸ್ತಾಪ ಕಳಿಸಲಾಗಿತ್ತು .
ಇದುವರೆಗೆ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿರ್ಲಿಲ್ಲ ಎಂದು ಜಿ.ಟಿ ದೇವೇಗೌಡ (G.T.Devegowda) ಹೇಳಿದ್ದಾರೆ. ಸಿಎಂ ಬೊಮ್ಮಾಯಿಯನ್ನು(Bommai) ಭೇಟಿ ಮಾಡಿದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ . ಬೇರೆ ಪಕ್ಷ ಸೇರುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ . ಕ್ಷೇತ್ರದ ಜನರ ಜತೆ ಸಮಾಲೋಚನೆ ನಡೆಸಿಯೇ ಮುಂದಿನ ನಡೆ . 2021 ರಲ್ಲಿ ಮೈಸೂರು ನಗರದಲ್ಲಿ ಮಳೆ ಹಾಳಿಯಿಂದ ಕೆರೆಕಟ್ಟೆ ಹೊಡೆದು ವಸತಿ ಪ್ರದೇಶದಲ್ಲಿ ನೀರು ನುಗ್ಗಿತ್ತು. ಈ ಬಗ್ಗೆ 138 ಕೋಟಿ ರೂ ಪ್ರಪೋಸಲ್ ಕಳುಹಿಸಿಕೊಟ್ಟಿದ್ದೆ . ಇದುವರೆಗೂ ಹಣ ಬಿಡುಗಡೆ ಆಗಿಲ್ಲ . ರಾಮದಾಸ್ ಕ್ಷೇತ್ರದಲ್ಲಿ ಹಣ ಬಿಡುಗಡೆ ಆಗಿತ್ತು. ನನ್ನ ಕ್ಷೇತ್ರಕ್ಕೆ ಆಗಿರ್ಲಿಲ್ಲ . ಜಿಲ್ಲಾಧಿಕಾರಿಗಳು, ನಗರ ಪಾಲಿಕೆ ಆಯುಕ್ತರ ಜೊತೆಗೆ ಚರ್ಚೆ ನಡೆಸಿ ಪ್ರಪೊಸಲ್ ಕಳುಹಿಸಿದ್ದೆ . ಸಿಎಂ ದಾವೋಸ್ ಹೋಗ್ಬಂದ್ಮೆಲೆ ಪ್ರಪೋಸರ್ ಕೊಡೋಣ ಅಂತ ಉಸ್ತುವಾರಿ ಸಚಿವರು ಹೇಳಿದ್ರು.ಕೂಡಲೆ ಹಣ ಬಿಡುಗಡೆ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ7 ಕೋಟಿ ಬಿಡುಗಡೆ ಮಾಡುವಂತೆ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿಸಿದ್ರು.ಇದನ್ನೂ ಓದಿ : – ಬಿಜೆಪಿ ವಿರುದ್ದ ಕಿಡಿಕಾರಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ
ಚುನಾವಣೆಯಲ್ಲಿ ಯಾರಿಗೆ ಬೆಂಬಲ ಎಂಬ ಪ್ರಶ್ನೆ
ನಾನೊಬ್ಬ ಹಿರಿಯನಾಗಿದ್ದು, ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಂತಕ್ಕೆ ಬೆಳೆದಿದ್ದೇನೆ. .ಹೀಗಿರುವಾಗ ದಾರಿ ತಪ್ಪಿಸುವ ನಿರ್ಣಯ ಕೈಗೊಳ್ಳಲ್ಲ .ಜನತಾ ದಳ ಯಾವ ಅಭ್ಯರ್ಥಿಗೆ ಇಳಿಸುತ್ತೋ ಅವರಿಗೇ ನನ್ನ ಮತ .ಪಕ್ಷದ ಅಭ್ಯರ್ಥಿಗೇ ನನ್ನ ಮತ ಎಂದು ಜಿ ಟಿ ದೇವೇಗೌಡ ಹೇಳಿದ್ರು. ಇದನ್ನೂ ಓದಿ : – ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆ ವರಿಷ್ಠರು ಶೀಘ್ರದಲ್ಲೇ ನಿರ್ಧರಿಸ್ತಾರೆ – ಸಿಎಂ ಬೊಮ್ಮಾಯಿ