ನಾನು ಯಾರಪ್ಪನ ಮರ್ಜಿಯಲ್ಲಿ ಇಲ್ಲ. ಇಡೀ ಸರ್ಕಾರವೇ ನಮ್ಮ ಮರ್ಜಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಟೀಕೆಗೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರ ಹಂಗಿನಲ್ಲೂ ಇಲ್ಲ. ಸರ್ಕಾರ, ಮಂತ್ರಿಗಳು ಹಾಗೂ ನಿಗಮ ಮಂಡಳಿಯ ಅಧ್ಯಕ್ಷರು ಇವರೆಲ್ಲ ನಮ್ಮ ತ್ಯಾಗದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಅವರು ನಮ್ಮ ಮರ್ಜಿಯಲ್ಲಿ ಇದ್ದಾರೆ ಎಂದರು.
ಮಂತ್ರಿ, ಮುಖ್ಯಮಂತ್ರಿ ನಮ್ಮ ತ್ಯಾಗದಿಂದ ಬಂದವರಾಗಿದ್ದಾರೆ. ನಮ್ಮ ಮರ್ಜಿಯಲ್ಲೇ ಮುಖ್ಯಮಂತ್ರಿಗಳು ಇದ್ದಾರೆ. ನಾವು ಯಾರ ಮರ್ಜಿಯಲ್ಲೂ ಇಲ್ಲ. ನಮ್ಮ ತ್ಯಾಗದಿಂದ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾನೆ. ನಾವು ತ್ಯಾಗ ಮಾಡಿ ಬಂದಿದ್ದರಿಂದ ಇವರು ಅಧಿಕಾರದಲ್ಲಿದ್ದಾರೆ ಎಂದು ಹೆಚ್ ವಿಶ್ವನಾಥ್ ಗುಡುಗಿದರು.