ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡುವಾಗ ಭಾವೋದ್ವೇಗಕ್ಕೆ ಒಳಗಾಗುಗುವುದು ಸಹಜ. ಯಾರಿಗೆ ಆದರೂ ರಾಜೀನಾಮೆ ನೀಡುವಾಗ ಬೇಸರ ಆಗುತ್ತದೆ ಎಂದು ಮಾಜಿ ಸ್ಪಿಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜಿನಾಮೆಯಿಂದ ಕಾಂಗ್ರೆಸ್ ಗೆ ಪ್ಲೆಸ್ಸೂ ಇಲ್ಲ ಮೈನಸ್ಸೂ ಆಗಲ್ಲ. ಅಧಿಕಾರ ಹೋದಾಗ ಎಲ್ಲರಿಗೂ ಬೇಸರ ಹಾಗೋದು ಸಹಜ. ಅದೇ ರೀತಿ ನಮಗೂ ನೋವಾಗತ್ತೆ ಅವರಿಗೂ ನೋವಾಗಿದೆ ಎಂದರು.
ಯಡಿಯೂರಪ್ಪ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಆರೋಗ್ಯ ಚೆನ್ನಾಗಿದ್ದು, ರಾಜಕಿಯ ಚಟುವಟಿಕೆಗಳು ಹೀಗೆ ಮುಂದವರೆಯಲಿ. ಅವರಿಗೆ 78 ವರ್ಷ ವಯಸ್ಸಾಗಿರುವುದರಿಂದ ಒತ್ತಡ ಇರುತ್ತೆ. ವಿಶ್ರಾಂತಿ ಅವಶ್ಯಕ ಬೇಕು ಎಂದು ಅವರು ಸಲಹೆ ನೀಡಿದರು.
ಪಕ್ಷದ ಸಿದ್ದಾಂತಕ್ಕೋ ಅಥವಾ ಒತ್ತಡಕ್ಕೋ ಯಡಿಯೂರಪ್ಪ ರಾಜಿನಾಮೆ ಸಲ್ಲಿಸಿದ್ದಾರೋ ಎಂದು ಬಲ್ಲವರು ಯಾರು? ಪಕ್ಷ ಅವರಿಗೆ ಅವಕಾಶ ಕೊಟ್ಟಿತ್ತು ಅದರಂತೆ ನಡೆದುಕೊಂಡಿದ್ದಾರೆ. ರಾಜಿನಾಮೆ ನಂತರ ಬೇಸರ ಸಹಜ ಒಂದೆರಡು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತೆ ಎಂದು ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕೆಲವು ವಲಸಿಗರು ಬಿಜೆಪಿ ಸಿದ್ದಾಂತ ನಂಬಿ ಹೋದರೋ ಇಲ್ಲವೇ ಯಡಿಯೂರಪ್ಪ ಅವರ ಸಿದ್ದಾಂತ ನಂಬಿ ಹೋದರೋ ಅದು ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಯಾರೂ ಏನೂ ಹೇಳಿಲ್ಲ. ಯಡಿಯೂರಪ್ಪ ರಾನೀನಾಮೆ ಕುರಿತು ಮಾಠಾಧೀಶರ ವಿರೋಧ ಕುರಿತು ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.