ಎಂ.ಬಿ ಪಾಟೀಲ್ ಅಶ್ವಥ್ ನಾರಾಯಣ್ ಭೇಟಿ ವಿಚಾರವಾಗಿ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ಎಂಬಿ ಪಾಟೀಲ್ ಹೇಳಿಕೆಯೇ ಮುಖ್ಯ. ಎಂ.ಬಿ ಪಾಟೀಲ್ ಅವರೇ ಸ್ಪಷಪಡಿಸಿದ್ದಾರೆ. ಅವರು ಹೇಳಿದ ಮೇಲೆ ನೋ ಕಮೆಂಟ್ಸ್ ಎಂದು ತಿಳಿಸಿದ್ರು.
ಐಪಿಎಸ್ ಅಧಿಕಾರಿ ಡಾ. ರವೀಂದ್ರನಾಥ್ ರಾಜೀನಾಮೆ ವಿಚಾರ
ಇದೊಂದು ಅತ್ಯಂತ ದುರ್ಬಲ ಹಾಗೂ ಭ್ರಷ್ಟ ಸರ್ಕಾರ. ಸಿಎಂಗೂ ಆಡಳಿತ ನಡೆಸಲು ಮುಕ್ತ ಅವಕಾಶ ಇಲ್ಲ. ನಕಲಿ ಜಾತಿ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದರು. ಇದಕ್ಕಾಗಿ ವರ್ಗಾವಣೆ ಆರೋಪ ಕೇಳಿ ಬಂದಿದೆ. ಇದು ನಿಜವಾಗಿದ್ದರೆ ಇದು ಮಹಾ ಅಪರಾಧ ಎಂದು ಹೇಳಿದ್ರು. ಇದನ್ನೂ ಓದಿ : – ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ಚಿನ್ನದ ರಥ
ರಾಜಕೀಯ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು
ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆಯೇ ನಡೆಸಬಾರದು. ಸರ್ಕಾರ ಬೇಜವಾಬ್ದಾರಿತನ ತೋರುತ್ತಿದೆ. ಈಗಾಗಲೇ ಈ ಬಗ್ಗೆ ಕ್ರಮ ವಹಿಸಬಹುದಿತ್ತು. ಬೇರೆ ರಾಜ್ಯಗಳ ತೀರ್ಪು ಬಂದಾಗಲೂ ಸರ್ಕಾರ ಏನು ಮಾಡಿಲ್ಲ. ಒಂದು ವೇಳೆ ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆ ನಡೆದರೆ ಅದು ಅನ್ಯಾಯ. ಇದಕ್ಕೆ ನಮ್ಮ ವಿರೋಧ ಇದೆ ಸಿದ್ದರಾಮಯ್ಯ ತಿಳಿಸಿದ್ರು.
ಇದನ್ನೂ ಓದಿ : – ದೇಶದ್ರೋಹ ಪ್ರಕರಣ ದಾಖಲಿಸಬೇಡಿ – ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಸೂಚನೆ