ಹುಬ್ಬಳ್ಳಿ : ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಅಕ್ರಮ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಹುಬ್ಬಳ್ಳಿ ಸಿಸಿಬಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಮೂವರನ್ನ ಪೋಲೀಸರು ಬಂಧಿಸಿದ್ದಾರೆ.
ನಗರದ ಕಿಮ್ಸ್ ಆಸ್ಪತ್ರೆಯ ವ್ಯಾಪ್ತಿಯ ಔಷಧಿ ಅಂಗಡಿಯಲ್ಲಿ ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ನಾಸೀರ್ ಹುಸೇನ್ ಅಕ್ತಾರ, ರಾಘವೇಂದ್ರ ಉಣಕಲ್, ನಾಗರಾಜ ನಡವಲಕೇರಿ ಎಂಬುವರೇ ಬಂಧಿತರಾಗಿದ್ದಾರೆ.
ನಾಸೀರ್ ಹುಸೇನ್ ಎಂಬುವವನಿಂದ ಇಂಜೆಕ್ಷನ್ 7 ಸಾವಿರಕ್ಕೆ ತಂದು ಹೆಚ್ಚಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬುವ ಖಚಿತ ಮಾಹಿತಿಯೊಂದಿಗೆ ಪೋಲೀಸರು ದಾಳಿ ಮಾಡಿ ನಾಲ್ಕು ವ್ಯೆಲ್ಸ ನೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂಪೋಟೆರಿಸನ್ ಬಿ ಎಂಬ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಅಕ್ರಮ ಮಾರಾಟ ಮಾಡುವ ಜಾಲವನ್ನ ಪತ್ತೆಹಚ್ಚುತ್ತಿರುವ ವಿದ್ಯಾನಗರ ಪೊಲೀಸರು ಇನ್ನೂ ಇದರ ಹಿಂದೆ ಇರುವ ಜಾಲಕ್ಕಾಗಿ ಬಲೆ ಬೀಸಿದ್ದಾರೆ.