ರಾಮ್ ದೇವ್ ವಿರುದ್ಧ ಐಎಂಎ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ!

ಆಧುನಿಕ ವೈದ್ಯಕೀಯ ಪದ್ಧತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಾಬಾ ರಾಮ್ ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಮಂಡಳಿ 1000 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದೆ.

ಅಲೋಪತಿ ವೈದ್ಯಕೀಯ ಪದ್ಧತಿ ಹಾಗೂ ವೈದ್ಯರ ವಿರುದ್ಧ ನಿಂದನಾತ್ಮಕ ಹೇಳಿಕೆ ಕುರಿತು ಯೋಗ ಗುರು ರಾಮ್ ದೇವ್ 15 ದಿನದೊಳಗಾಗಿ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಐಎಂಎ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದೆ.

ಐಎಂಎ ಉತ್ತರಾಖಂಡ್ ವಿಭಾಗದ ಕಾರ್ಯದರ್ಶಿ ಅಜಯ್ ಖನ್ನಾ ಬುಧವಾರ ಬಾಬಾ ರಾಮ್ ದೇವ್ ಗೆ 6 ಪುಟಗಳ ನೋಟಿಸ್ ಜಾರಿ ಮಾಡಿದ್ದು, ರಾಮ್ ದೇವ್ ಅವರ ಹೇಳಿಕೆಯಿಂದ ಐಎಂಎ ಸದಸ್ಯರಾಗಿರುವ ದೇಶದ 2000 ವೈದ್ಯರ ಘನತೆಗೆ ಧಕ್ಕೆ ತರುವಂತದ್ದಾಗಿದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!