ಭಾರತದ ಬ್ಯಾಂಕ್ ಗಳಿಂದ ಸಾಲ ಮಾಡಿ ಮರುಪಾವತಿ ಮಾಡದೇ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ದಿವಾಳಿ ಎಂದು ಬ್ರಿಟನ್ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಜಯ್ ಮಲ್ಯಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿರುವುದರಿಂದ ಬ್ಯಾಂಕ್ ಸಾಲ ತೀರಿಸುವುದಾಗಲಿ, ನೌಕರರಿಗೆ ವೇತನ ನೀಡುವುದಾಗಲಿ ಸಾಧ್ಯವಿಲ್ಲ. ಆದ್ದರಿಂದ ಅವರನ್ನು ದಿವಾಳಿ ಎಂದು ಘೋಷಿಸುವುದಾಗಿ ಕೋರ್ಟ್ ತಿಳಿಸಿದೆ.
ವಿಜಯ್ ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿರುವುದಕ್ಕೆ ಭಾರತೀಯ ಬ್ಯಾಂಕ್ ಗಳು ತಕರಾರು ತೆಗೆದಿಲ್ಲ ಎಂದು ಹೇಳಲಾಗಿದೆ.