ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಆಸೆಯನ್ನು ಚಿತ್ರರಂಗದ ಕೆಲವು ಸ್ನೇಹಿತರು ಈಡೇರಿಸಿದ್ದಾರೆ.
ಬಡತನದಲ್ಲಿದ್ದವರಿಗೆ ಸಹಾಯ ಮಾಡುವ ಉದ್ದೇಶದಿಂದ `ಉಸಿರು’ ಎಂಬ ತಂಡವನ್ನು ಕಟ್ಟಿದ್ದ ಸಂಚಾರಿ ವಿಜಯ್, ಬುಡಕಟ್ಟು ಜನಾಂಗದವರ ಮನೆಗಳಿಗೆ ಟಾರ್ಪಲ್ ಹೊದಿಕೆ ಒದಗಿಸಬೇಕೆಂಬುದು ಅವರ ಕೊನೆ ಆಸೆಯಾಗಿತ್ತು. ಇದಕ್ಕಾಗಿ ಅವರು ಸಿದ್ಧತೆ ಮಾಡಿಕೊಳ್ಳುವಾಗಲೇ ಅಕಾಲಿಕ ನಿಧನ ಹೊಂದಿದರು.
ಇದೀಗ ಅವರ ಉಸಿರು ತಂಡ ಸಂಚಾರಿ ವಿಜಯ್ ಅವರ ಆಸೆಯನ್ನು ನೆರವೇರಿಸಿದೆ. ಮಡಿಕೇರಿ ಕಡೆ ಸಂಚಾರ ಬೆಳೆಸಿರುವ ನಟಿ ನೀತು, ಕವಿರಾಜ್, ಹರೀಶ್ ಅರಸು ಮುಂತಾದವರ ತಂಡ ಹಲವರು ಬುಡಕಟ್ಟು ಜನಾಂಗದವರ ಮನೆಗಳಿಗೆ ಟಾರ್ಪಲ್ ಹೊದಿಸಿದೆ.