ಸ್ಪಿನ್ ಆಲ್ ರೌಂಡರ್ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 174 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿದಿದೆ. 400 ರನ್ ಗಳ ಭಾರೀ ಮುನ್ನಡೆ ಪಡೆದ ಭಾರತ ಪ್ರವಾಸಿ ತಂಡದ ಮೇಲೆ ಫಾಲೋಆನ್ ಹೇರಿದೆ.
ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ 4 ವಿಕೆಟ್ ಗೆ 108 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ 174 ರನ್ ಗಳಿಗೆ ಪತನಗೊಂಡಿತು.
ಭಾರತದ ಪರ ದಾಖಲೆಯ ಅಜೇಯ 175 ರನ್ ಸಿಡಿಸಿ ಮಿಂಚಿದ್ದ ರವೀಂದ್ರ ಜಡೇಜಾ ಬೌಲಿಂಗ್ ನಲ್ಲೂ 5 ವಿಕೆಟ್ ಪಡೆದು ಮಿಂಚಿದರು. ಸ್ಪಿನ್ನರ್ ಆರ್.ಅಶ್ವಿನ್ ಮತ್ತು ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ, ಮೊಹಮದ್ ಶಮಿ 1 ವಿಕೆಟ್ ಗಳಿಸಿದರು.