ನಾಯಕ ಹರ್ಮನ್ ಪ್ರೀತ್ ಸಿಂಗ್ ಸಿಡಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು 3-2 ಗೋಲುಗಳಿಂದ ಬಗ್ಗುಬಡಿದು ಭರ್ಜರಿಯಾಗಿ ಶುಭಾರಂಭ ಮಾಡಿದೆ.
ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತದ ಪರ ಹರ್ಮನ್ ಪ್ರೀತ್ 2 ಮತ್ತು ರುಪಿಂದರ್ ಸಿಂಗ್ ಒಂದು ಗೋಲು ಸಿಡಿಸಿದರೆ, ನ್ಯೂಜಿಲೆಂಡ್ ಪರ ಕೇನ್ ರಸೆಲ್ ಮತ್ತು ಸ್ಟೆಫಾನ್ ಜೆನ್ನಿಸ್ ತಲಾ ಒಂದು ಗೋಲು ಬಾರಿಸಿದರು.
ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಭಾರತ ತಂಡ 2ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದಿದ್ದೂ ಅಲ್ಲದೇ ಅದರಲ್ಲಿ ಯಶಸ್ವಿಯಾಗುವ ಮೂಲಕ ಮುನ್ನಡೆ ಗಿಟ್ಟಿಸಿತು.