2ನೇ ಟೆಸ್ಟ್: ಆಂಡರ್ಸನ್ ದಾಳಿಗೆ ಕುಸಿತ ಭಾರತ: 364ಕ್ಕೆ ಆಲೌಟ್!

ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ 364 ರನ್ ಗೆ ಆಲೌಟ್ ಆಗಿದೆ.

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 3 ವಿಕೆಟ್ ಗೆ 276 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ಚಹಾ ವಿರಾಮಕ್ಕೂ ಮುನ್ನ 364 ರನ್ ಗಳಿಗೆ ಆಲೌಟಾಗಿದೆ.

ಇಂಗ್ಲೆಂಡ್ ಬೌಲರ್ ಗಳು ನೀಡಿದ ತಿರುಗೇಟಿನಿಂದ ಶತಕ ಬಾರಿಸಿದ್ದ ಕೆಎಲ್ ರಾಹುಲ್ ಬೇಗನೇ ನಿರ್ಗಮಿಸಿದರೆ, ಅಜಿಂಕ್ಯ ರಹಾನೆ (1) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.

ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ 58 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 37 ರನ್ ಬಾರಿಸಿ ಔಟಾದರೆ, ರವೀಂದ್ರ ಜಡೇಜಾ 120 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 40 ರನ್ ಗಳಿಸಿ ತಂಡವನ್ನು 350ರ ಗಡಿ ದಾಟಿಸಿದರು.

ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 5 ವಿಕೆಟ್ ಪಡೆದರೆ, ಓಲಿ ರಾಬಿನ್ಸನ್ ಮತ್ತು ಮಾರ್ಕ್ ವುಡ್ ತಲಾ 2 ಮತ್ತು ಮೊಯಿನ್ ಅಲಿ 1 ವಿಕೆಟ್ ಗಳಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!