ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು 76 ರನ್ ಗಳ ಭಾರೀ ಅಂತರದಿಂದ ಹೀನಾಯ ಸೋಲುಕಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ 354 ರನ್ ಗಳ ಭಾರೀ ಹಿನ್ನಡೆ ಪಡೆದಿದ್ದ ಭಾರತ ತಂಡ ನಾಲ್ಕನೇ ದಿನವಾದ ಶನಿವಾರ 2 ವಿಕೆಟ್ ಕಳೆದುಕೊಂಡು 215 ರನ್ ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿತು. ಆದರೆ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಭಾರತ ಭೋಜನ ವಿರಾಮಕ್ಕೂ ಮುನ್ನವೇ 278 ರನ್ ಗಳಿಗೆ ಪತನಗೊಂಡಿತು.
ನಿನ್ನೆ 91 ರನ್ ಗಳಿಸಿದ್ದ ಚೇತೇಶ್ವರ್ ಪೂಜಾರ ಒಂದೂ ರನ್ ಸೇರಿಸದೇ ಔಟಾಗಿ ಶತಕ ವಂಚಿತರಾದರೆ, ನಾಯಕ ವಿರಾಟ್ ಕೊಹ್ಲಿ ಅರ್ಧಶತಕ (55) ಪೂರೈಸುತ್ತಿದ್ದಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇಂಗ್ಲೆಂಡ್ ಪರ ಓಲಿ ರಾಬಿನ್ಸನ್ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಕ್ರೇಗ್ ಓವರ್ಟನ್ 3 ವಿಕೆಟ್ ಗಳಿಸಿದರು.