ಚೆನ್ನೈ: ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಇಂದು. ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 3 ವಿಕೆಟ್‌ಗಳಿಗೆ 263 ರನ್ ಗಳಿಸಿದೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಭರ್ಜರಿ ಶತಕ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಜೊತೆಗೆ ಇಂದು ಸಹ ಬಿಗ್ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದಾರೆ.

ಸದ್ಯ 128 ರನ್ ಗಳಿಸಿರು ರೂಟ್ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರೆ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನೆಡೆಯಾಗಲಿದೆ. ಇಂಗ್ಲೆಂಡ್ ಪಾಳಯದಲ್ಲಿ ಇನ್ನೂ 7 ವಿಕೆಟ್ಗಳಿದ್ದು, ಆದಷ್ಟೂ ಬೇಗ ಭಾರತೀಯ ಬೌಲರ್ಗಳು ಇಂಗ್ಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಕಡೆ ಗಮನ ಹರಿಸಬೇಕಾಗಿದೆ. ಟೀಂ ಇಂಡಿಯಾ ಬೌಲರ್ಗಳು ಆದಷ್ಟು ಬೇಗ ರೂಟ್ನನ್ನು ಕಟ್ಟಿಹಾಕಬೇಕಿದೆ.