ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,742 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 535 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,13,71,901ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 4,20,551ಕ್ಕೆ ಜಿಗಿತ ಕಂಡಿದೆ.
ದೇಶದಲ್ಲಿ ಒಂದೇ ದಿನದಲ್ಲಿ 39,972 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 3,05,43,138ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,08,212ಕ್ಕೆ ಏರಿಕೆಯಾಗಿದೆ.