ಚಂದ್ರಯಾನ ಯೋಜನೆ ನಂತರ ಮೊದಲ ಬಾರಿ ಉಡಾವಣೆಗೆ ಸಿದ್ದಗೊಂಡಿದ್ದ ಜಿಎಸ್ ಎಲ್ ವಿ-10 ಉಪಗ್ರಹ ತಾಂತ್ರಿಕ ದೋಷದಿಂದ ನಭಕ್ಕೆ ಚಿಮ್ಮಲು ವಿಫಲವಾಗಿದೆ.
ಇಸ್ರೊದ ಮಹಾತ್ವಾಕಾಂಕ್ಷಿ ಯೋಜನೆಯಾದ ಜಿಎಸ್ ಎಲ್ ವಿ ಎಫ್-19 ಉಪಗ್ರಹ ಗುರುವಾರ ಮುಂಜಾನೆ ಬಾಹ್ಯಕಾಶಕ್ಕೆ ಹಾರಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಈ ಪ್ರಯತ್ನ ವಿಫಲವಾಗಿದ್ದು, ಇಸ್ರೊಗೆ ಭಾರೀ ಹಿನ್ನಡೆ ಉಂಟಾಗಿದೆ.
ಕ್ರೈನೋಜೆನಿಕ್ ಸ್ಟೇಜ್ ನಲ್ಲಿ ಇಗ್ನಿಷನ್ ಕೀ ಕಾರ್ಯ ನಿರ್ವಹಿಸದ ಕಾರಣ ಉಪಗ್ರಹ ಉಡಾವಣೆ ಆಗಲೇ ಇಲ್ಲ. ಆದ್ದರಿಂದ ಇಸ್ರೊ ಕೂಡಲೇ ಉಪಗ್ರಹ ಉಡಾವಣೆ ವಿಫಲವಾಗಿದ್ದು, ತಾಂತ್ರಿಕ ದೋಷ ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉಡಾವಣೆಗೆ ದಿನಾಂಕ ನಿಗದಿ ಮಾಡುವುದಾಗಿ ಪ್ರಕಟಿಸಿದೆ.