ದೇಶದಲ್ಲಿ ಕಳೆದ ಒಂದು ದಿನದಲ್ಲಿ 36,571 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 540 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಹಬ್ಬಗಳ ಮಾಸದಲ್ಲಿ ಕೊರೊನಾ ಅಬ್ಬರ ಹೆಚ್ಚುವ ಮುನ್ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,23,58,829ಕ್ಕೆ ಜಿಗಿತ ಕಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 4,33,589ಕ್ಕೆ ಏರಿದೆ.
ಒಂದು ದಿನದಲ್ಲಿ 36,571 ಸೋಂಕಿತರು ಗುಣಮುಖಿತರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,63,605ಕ್ಕೆ ಕುಸಿದಿದೆ.