ದೇಶದಲ್ಲಿ ಸತತ ಮೂರನೇ ದಿನ 3 ಲಕ್ಷಕ್ಕಿಂತ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿದ್ದು, ಶನಿವಾರ ಒಂದೇ ದಿನ 3.46 ಲಕ್ಷ ಪ್ರಕರಣಗಳು ವರದಿಯಾದರೆ, ಇದೇ ಮೊದಲ ಬಾರಿ 2674 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,19,838ಕ್ಕೆ ಜಿಗಿತ ಕಂಡರೆ, ಒಟ್ಟಾರೆ ಗುಣಮುಖಿತರ ಸಂಖ್ಯೆ 25,52,940ಕ್ಕೆ ತಲುಪಿದೆ.