ಗೆಲುವಿನ ಆರಂಭ ಪಡೆದಿದ್ದ ಭಾರತ ತಂಡ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ.
ಭಾನುವಾರ ನಡೆದ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ 1-7 ಗೋಲುಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತು. ಭಾರತದ ಪರ ದಿಲ್ ಪ್ರೀತ್ ಸಿಂಗ್ ಒಂದು ಗೋಲು ಬಾರಿಸಿದ್ದಕ್ಎಕ ಸಮಾಧಾನಪಟ್ಟುಕೊಂಡರೆ, ಆಸ್ಟ್ರೇಲಿಯಾ ಪರ ಟಿಮ್ ಬ್ರಾಂಡ್, ಜುಶುಹಾ ಬೆಲ್ಜ್, ಡೇನಿಯಲ್ ಜೇಮ್ಸ್ ಬೀಲೆ, ಫ್ಲಿನ್ ಆ್ಯಂಡ್ರೋ ಒಗಿಲಿವ್ ಮತ್ತು ಜೆರಿಮಿ ಥಾಮಸ್ ಹೇವರ್ಡ್ ತಲಾ ಒಂದು ಗೋಲು ಸಿಡಿಸಿದರು