ಭಾರತ-ಚೀನಾ ಗಡಿ ಘರ್ಷಣೆ: ನಮ್ಮ ಬೆಂಬಲ ಭಾರತಕ್ಕೆ ಎಂದ ಅಮೆರಿಕ

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ಘರ್ಷಣೆಗೆ ಸಂಬಂಧಿಸಿದಂತೆ ಅಮೆರಿಕ ತನ್ನ ನಿಲುವು ಹೇಳಿದೆ. ಲಡಾಖ್ ಗಡಿ ಸಂಘರ್ಷದಲ್ಲಿ ನಮ್ಮ ನಿಲುವೇನಿದ್ದರೂ ಭಾರತದ ಪರ ಎಂದು ಅಮೆರಿಕ ಹೇಳಿದೆ. ಸಂಕಷ್ಟದ ಸಮಯದಲ್ಲಿ ಸ್ನೇಹಿತನೊಂದಿಗೆ ನಿಲ್ಲುವುದು ನಮ್ಮ ಜವಾಬ್ದಾರಿ. ಲಡಾಖ್ ಗಡಿ ಸಂಘರ್ಷವನ್ನು ಭಾರತ ನಿಭಾಯಿಸಿದ ರೀತಿ ಅಭಿನಂದನಾರ್ಹ. ಉಭಯ ದೇಶಗಳ ಈ ಬಿಕ್ಕಟ್ಟು ಮಾತುಕತೆಯಿಂದ ಮಾತ್ರ ಬಗೆಹರಿಯಲಿದೆ ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.
ಇನ್ನು, ಡೊನಾಲ್ಡ್ ಟ್ರಂಪ್ ಸರ್ಕಾರ ಸಹ ಭಾರತ ಮತ್ತು ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧವೆಂದಿತ್ತು. ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ನಾವು ಸಿದ್ಧ. ಈ ಸಂಬಂಧ ಎರಡೂ ದೇಶಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.