ಆಫ್ಘಾನಿಸ್ತಾನದಲ್ಲಿ ಸರಕಾರ ರಚನೆ ಮಾಡುತ್ತಿದ್ದಂತೆ ತಾಲಿಬಾನಿಗಳು ದಿನಕ್ಕೊಂದು ವಿಚಿತ್ರ ಕಾನೂನುಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಅರಬ್ ದೇಶಗಳಲ್ಲಿ ನಡೆಯುತ್ತಿರುವ ಭಾರತದ ಜನಪ್ರಿಯ ಐಪಿಎಲ್ ಟಿ-20 ಟೂರ್ನಿ ಮೇಲೂ ಕೆಂಗೆಣ್ಣು ಬೀರಿದೆ.
ಐಪಿಎಲ್ ಟಿ-20 ಟೂರ್ನಿಯನ್ನು ಆಫ್ಘಾನಿಸ್ತಾನದಲ್ಲಿ ಪ್ರಸಾರ ಮಾಡದಂತೆ ತಾಲಿಬಾನ್ ಸರಕಾರ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಬರುತ್ತಾರೆ ಮತ್ತು ಟಿವಿಯಲ್ಲಿ ಅವರ ಮುಖಗಳು ಕಾಣುತ್ತವೆ ಎಂದು ತಾಲಿಬಾನ್ ಕಾರಣ ನೀಡಿದೆ.
ಮಹಿಳೆಯರು ಡ್ಯಾನ್ಸ್ ಮಾಡುವುದು ಮತ್ತು ಪ್ರೇಕ್ಷಕರಾಗಿ ಮಹಿಳೆಯರು ಇರುವ ಈ ಐಪಿಎಲ್ ಟೂರ್ನಿಯನ್ನು ಆಫ್ಘಾನಿಸ್ತಾನದ ಪ್ರಸಾರ ಸಂಸ್ಥೆಗಳು ಪ್ರಸಾರ ಮಾಡುವುದು ಖಂಡನೀಯ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಲಿಬಾನ್ ವಕ್ತಾರ ಹೇಳಿಕೆಯಲ್ಲಿ ವಿವರಿಸಿದ್ದಾರೆ.