ಭಾರತದಲ್ಲಿ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಮೊಟಕುಗೊಂಡಿದ್ದ ಐಪಿಎಲ್ ಟಿ-20 ಟೂರ್ನಿ ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಪುನರಾರಂಭಗೊಳ್ಳಲಿದ್ದು, ಅಕ್ಟೋಬರ್ 15ರಂದು ಫೈನಲ್ ನಡೆಯುವ ಸಾಧ್ಯತೆ ಇದೆ.
ದುಬೈನಲ್ಲಿ ಐಪಿಎಲ್ 2021ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ನಡೆಸುವ ಬಗ್ಗೆ ಬಿಸಿಸಿಐ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ ನಡುವೆ ಮಾತುಕತೆ ಫಲಪ್ರದವಾಗಿದ್ದು, ಬಹುತೇಕ ಪಂದ್ಯಗಳ ದಿನಾಂಕ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಮೊಟಕುಗೊಂಡಿರುವ ಐಪಿಎಲ್ ಟಿ-20 ಟೂರ್ನಿಯ ಉಳಿದ ಪಂದ್ಯಗಳನ್ನು ಪೂರೈಸಲು ಬಿಸಿಸಿಐಗೆ 25 ದಿನಗಳ ಅವಕಾಶವಿದೆ. ಈ 25 ದಿನದೊಳಗೆ ಉಳಿದ ಪಂದ್ಯಗಳನ್ನು ಪೂರೈಸಬೇಕಾದ ಒತ್ತಡದಲ್ಲಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.