ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ವಿದೇಶಕ್ಕೆ ಸ್ಥಳಾಂತರಗೊಂಡಿದ್ದ ಐಪಿಎಲ್-2021 ಕ್ರಿಕೆಟ್ ಟೂರ್ನಿ ಮೇಲೆ ಮತ್ತೆ ಕೊರೊನಾ ಕರಿನೆರಳು ಬೀರಿದ್ದು, ಟೂರ್ನಿ ನಡೆಯುವ ಬಗ್ಗೆ ಆತಂಕ ಶುರುವಾಗಿದೆ.
ಬುಧವಾರ ನಡೆಯಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಹೈದರಾಬಾದ್ ತಂಡದ ನಟರಾಜನ್ ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಉಳಿದ 6 ಆಟಗಾರರಿಗೆ ಕ್ವಾರಂಟೈನ್ ವಿಧಿಸಲಾಗಿದೆ.
ಟಿ. ನಟರಾಜನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟರೆ, ಅವರ ಒಡನಾಟ ಇದ್ದ ವಿಜಯ್ ಶಂಕರ್, ಟೀಮ್ ಮ್ಯಾನೇಜರ್ ವಿಜಯ್ ಕುಮಾರ್ ಹಾಗೂ ತಂಡದ ನಾಲ್ವರು ಸಹಾಯಕ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.