ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಂಘಟಿತ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ 128 ರನ್ ಗಳ ಸಾಧಾರಣ ಗುರಿ ಒಡ್ಡಿದೆ.
ಶಾರ್ಜಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು.
ಡೆಲ್ಲಿ ಪರ ಸ್ಟೀವನ್ ಸ್ಮಿತ್ (39) ಮತ್ತು ನಾಯಕ ರಿಷಭ್ ಪಂತ್ (39) ಮತ್ತು ಶಿಖರ್ ಧವನ್ (24) ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ಗಳು ಎರಡಂಕಿಯ ಮೊತ್ತ ದಾಖಲಿಸಲಿಲ್ಲ. ಸತತ ವಿಕೆಟ್ ಕಳೆದುಕೊಂಡ ಡೆಲ್ಲಿ ದೊಡ್ಡ ಮೊತ್ತ ಗಳಿಸುವ ಅವಕಾಶ ಕಳೆದುಕೊಂಡಿತು.
ಕೆಕೆಆರ್ ಪರ ಲೂಕಿ ಫರ್ಗ್ಯೂಸನ್, ಸುನೀಲ್ ನಾರಾಯಣ್ ಮತ್ತು ವೆಂಕಟೇಶ್ ಅಯ್ಯರ್ ತಲಾ 2 ವಿಕೆಟ್ ಪಡೆದರು.