ಕೋವಿಡ್ – 19, ( covied ) ಮಂಕಿಪಾಕ್ಸ್ ನಂತಹ ವೈರಸ್ ಗಳ ಜತೆಗೆ ಇರಾಕ್ (iraq) ನಲ್ಲಿ ರಕ್ತಸ್ರಾವದೊಂದಿಗೆ ಜನರು ಸಾಯುವಂತಹ ಮಾರಣಾಂತಿಕ ಜ್ವರ ಹರಡುವ ಸಾಂಕ್ರಾಮಿಕ ಭೀತಿ ಮೂಡಿಸಿದೆ. ಪ್ರಾಣಿಗಳಲ್ಲಿ ರಕ್ತ ಹೀರುವ ಕೀಟಗಳು ವಿಪರೀತವಾಗುತ್ತಿದ್ದು, ಅವುಗಳ ಮೂಲಕ ಮನುಷ್ಯರಿಗೂ ವೈರಾಣು ತಗುಲುತ್ತಿದೆ.
ಇರಾಕ್ ನ ಹಳ್ಳಿ ಹಳ್ಳಿಗಳಲ್ಲಿ, ಸಂಪೂರ್ಣ ಸುರಕ್ಷತಾ ಕಿಟ್ ಗಳನ್ನು ಧರಿಸಿದ ಆರೋಗ್ಯ ಕಾರ್ಯಕರ್ತರು, ಜಾನುವಾರುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಕ್ರಿಮಿಯನ್ – ಕಾಂಗೋ ಹೆಮೊರೇಜ್ ಜ್ವರವು (CCHF) ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿದೆ. ಈ ವರ್ಷ ಇರಾಕ್ನಲ್ಲಿ 19 ಮಂದಿ ಮೃತಪಟ್ಟಿದ್ದು, 111 ಸಿಸಿಎಚ್ಎಫ್ ಪ್ರಕರಣಗಳು ದಾಖಲಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ : – ಆಧಾರ್ ಕಾರ್ಡ್ ಪ್ರತಿ ಹಂಚಿಕೊಳ್ಳಬೇಡಿ- ನಾಗರಿಕರಿಗೆ ಸರ್ಕಾರದ ಮಹತ್ವದ ಸೂಚನೆ
ಈ ವೈರಸ್ ನಿವಾರಣೆಗೆ ಯಾವುದೇ ಲಸಿಕೆ ಲಭ್ಯವಿಲ್ಲ. ಅದರ ಹರಡುವಿಕೆ ಬಹಳ ವೇಗವಾಗಿರುತ್ತದೆ. ಇದು ದೇಹದ ಒಳಗೆ ಹಾಗೂ ಬಾಹ್ಯದಲ್ಲಿ ವಿಪರೀತ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಮೂಗಿನಿಂದ ರಕ್ತ ಸುರಿಯುತ್ತದೆ. ಐದರಲ್ಲಿ ಎರಡು ಪ್ರಕರಣಗಳು ಸಾವಿನಲ್ಲಿ ಅಂತ್ಯವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ : – ಯುನಿಕಾರ್ನ್ ಮೂಲಕ 25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹ – ಮೋದಿ