ಉಡುಪಿ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದರೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯವಾಗಿದ್ದವರಿಗೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆ-ಜಿಲ್ಲೆಗಳಲ್ಲೂ ಪ್ರವಾಸ ನಡೆಸಿದ್ದಾರೆ. ಪ್ರವಾಹ, ಬರ, ಕೋವಿಡ್ ಮೊದಲ ಅಲೆ, ಎರಡನೇ ಅಲೆ, ಜನರ ಸಂಕಷ್ಟಕ್ಕೆ ಸ್ಪಂದನೆ, ಪ್ರತಿಯೊಂದು ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಿಎಂ ಬದಲಾವಣೆ ಅಗತ್ಯವೇ ಇಲ್ಲ ಎಂದರು.
ಸಿಎಂ ಯಡಿಯೂರಪ್ಪ ಪರ-ವಿರೋಧ ಸಹಿ ಸಂಗ್ರಹ ಮಾಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಸಹಿಸಂಗ್ರಹ ಮಾಡಲಾಗದು ಎಂದು ಹೇಳಿದರು.
ಶಾಸಕರನ್ನು ಕರೆದು ಹೈಕಮಾಂಡ್ ಅಭಿಪ್ರಾಯ ಕೇಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ವರಿಷ್ಠರು ಕ್ರಮ ಕೈಗೊಳ್ಳಬಹುದು. ಆದರೆ ಯಾರ್ಯಾರೋ ಶಾಸಕರ ಸಹಿ ಸಂಗ್ರಹ ಮಾಡಲಾಗದು. ಹಾಗೇ ಮಾಡಿದರೂ ನಾನು ಯಾವುದೇ ಸಹಿ ಹಾಕಲ್ಲ ಎಂದು ತಿಳಿಸಿದರು.