ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿನ ಪಾತ್ರದ ಬಗ್ಗೆ ಜಾರಿ ನಿರ್ದೇಶನಾಲಯ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದೆ.
ಸುಖೇಶ್ ಚಂದ್ರಶೇಖರ್ ಅವರ ಜೊತೆ ಹಣಕಾಸು ವಹಿವಾಟು ನಡೆಸಿ 200 ಕೋಟಿ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ನೋಟಿಸ್ ನೀಡಲಾಗಿದ್ದು, 36 ವರ್ಷದ ನಟಿಗೆ ಇದು ಎರಡನೇ ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ರಾನ್ ಬ್ಯಾಕ್ಸಿ ಕಂಪನಿಯ ಪ್ರಮೋಟರ್ ಗಳಾದ ಶಿವೇಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರಿಗೆ 200 ಕೋಟಿ ರೂ. ವನ್ನು ಸುಖೇಶ್ ಚಂದ್ರಶೇಖರ್ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ಸುಖೇಶ್ ಅವರ ಪತ್ನಿ ಲೀನಾ ಪಾಲ್ ಜೊತೆ ಜಾಕ್ವೆಲಿನ್ ಉತ್ತಮ ಒಡನಾಟ ಹೊಂದಿದ್ದು, ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.