ಜೇಮ್ಸ್ ( JAMES)ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇವತ್ತು ನಟ ಶಿವರಾಜ್ ಕುಮಾರ್ ಜೊತೆ ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ರು.
ಜೇಮ್ಸ್ ( JAMES)ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇವತ್ತು ನಟ ಶಿವರಾಜ್ ಕುಮಾರ್ ಜೊತೆ ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ರು. ಬಳಿಕ ಮಾತನಾಡಿದ ಕಿಶೋರ್ ಪತ್ತಿಕೊಂಡ ಸಿದ್ದರಾಮಯ್ಯನವರಿಗೆ ನಾವು ಸಿನಿಮಾಗೆ ಆಹ್ವಾನ ಮಾಡಿದ್ವಿ ಅಷ್ಟೇ. ನಾನು ಎಲ್ಲೂ ದಿ ಕಾಶ್ಮೀರ್ ಸಿನಿಮಾದಿಂದ ಜೇಮ್ಸ್ ಸಿನಿಮಾ ಗೆ ಸಮಸ್ಯೆ ಆಗ್ತಿದೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ರು. ದಿ ಕಾಶ್ಮೀರಿ ಸಿನಿಮಾದಿಂದ ಜೇಮ್ಸ್ ಸಿನಿಮಾಗೆ ಯಾವುದೇ ಸಮಸ್ಯೆ ಇಲ್ಲ. ಇದನ್ನು ಓದಿ :-‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್’ ಸಿನಿಮಾಗೆ ತೊಂದರೆಯಿಲ್ಲ- ಶಿವರಾಜ್ ಕುಮಾರ್
ಆದರೆ ಆರ್ ಆರ್ ಆರ್ (RRR) ಸಿನಿಮಾದಿಂದ ಸ್ವಲ್ಪ ಸಮಸ್ಯೆ ಆಗಿದೆ ಅಷ್ಟೇ ಎಂದು ತಿಳಿಸಿದ್ರು. ಜೇಮ್ಸ್ ಸಿನಿಮಾ 386 ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು. ಆದರೆ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಯಿಂದ ಜೇಮ್ಸ್ ಸಿನಿಮಾ ಥಿಯೇಟರ್ ಗಳು ಕಡಿಮೆಯಾಗಿವೆ ಎಂದು ಹೇಳಿದ್ರು. ಸಿನಿಮಾ ಸಮಸ್ಯೆ ಏನೇ ಇದ್ರು ಅದಕ್ಕೆ ನಾನು ಸಪೋರ್ಟ್ ಮಾಡ್ತಾನೆ ಅಂತಾ ಸಿಎಂ ಹೇಳಿದ್ದಾರೆ. ಪುನೀತ್ ಅವ್ರು ನನ್ನ ತಮ್ಮನ ತರ. ಹೀಗಾಗಿ ಏನು ಬೇಕಿದ್ರೂ ಸಪೋರ್ಟ್ ಮಾಡ್ತೀನಿ ಅಂದ್ರು. ಬೆಂಗಳೂರಿನಲ್ಲಿ ೨೫ ಲಕ್ಷ ಕಲೆಕ್ಷನ್ ಆಗುವ ಕಡೆ RRR ಸಿನಿಮಾ ಗಳನ್ನು ಹಾಕ್ತಿದ್ದಾರೆ. ಅದೇ ತೊಂದರೆ ಆಗಿದೆ ಎಂದು ಹೇಳಿದೆ. ಅದಕ್ಕೆ ಫಿಲ್ಮ್ ಚೇಂ
ಬರ್ ಬಳಿ ಮಾತಾಡಿ ಅಂತಾ ಸಿಎಂ ಹೇಳಿದ್ರು. ಮೊದಲು ಜೇಮ್ಸ್ ಸಿನಿಮಾ 386 ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಇವಾಗ RRR ಸಿನಿಮಾ ಬಿಡುಗಡೆಯಿಂದ, ಜೇಮ್ಸ್ ಸಿನಿಮಾ ನಾಳೆಯಿಂದ 275 ಥಿಯೇಟರ್ ಗಳಿಗೆ ಬರುತ್ತೆ. ಎರಡು ಚಿತ್ರಮಂದಿರಗಳಲ್ಲಿ ಮಾತ್ರ ನೈಟ್ ಒಂದು ಶೋ ತೆಗೀತಿವಿ ಅಂದಿದ್ದಾರೆ. ನೈಟ್ ಶೋ ತೆಗೆದು ಕಾಶ್ಮೀರ ಫೈಲ್ಸ್ ( THE KASHMIRI FILES ) ಹಾಕ್ತೀವಿ ಅಂತ ಕೇಳಿದ್ರು. ನಾನು ಆಗಲ್ಲ, ಜೇಮ್ಸ್ ನಡೀಲಿ ಅಂದೆ. ಅಷ್ಟೇ ಅದು, ಆ ವಿಷ್ಯ ಅಲ್ಲಿಗೇ ಕ್ಲೋಸ್ ಆಯ್ತು ಎಂದು ವಿವರಿಸಿದ್ದಾರೆ. ಇದೇ ವಿಷಯದ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದೇನೆ. ಫುಲ್ ಥಿಯೇಟರ್ ನಲ್ಲಿ ಜೇಮ್ಸ್ ತೆಗೆದು ಕಾಶ್ಮೀರ ಫೈಲ್ಸ್ ಹಾಕಿಲ್ಲ ಎಂದು ಕಿಶೋರ್ ಪತ್ತಿಕೊಂಡ ಸ್ಪಷ್ಟಪಡಿಸಿದ್ರು.
ಇದನ್ನು ಓದಿ :-‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್’ ಸಿನಿಮಾಗೆ ತೊಂದರೆಯಿಲ್ಲ- ಶಿವರಾಜ್ ಕುಮಾರ್