ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಜನತಾ ಪಕ್ಷದ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯಾಧ್ಯಕ್ಷ ಕೆ.ಎಂ.ಪಾಲಾಕ್ಷ ನೇತೃತ್ವದಲ್ಲಿ ಜನತಾ ಪಕ್ಷ ವತಿಯಿಂದ ಗುರುವಾರ ಬೆಳಿಗ್ಗೆ ಪಕ್ಷದ ಕಚೇರಿಯ ಮುಂಭಾಗ ಫೈ ಕಾರ್ಡ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಪ್ರತಿಭಟನೆಯಲ್ಲಿ ಕಾರ್ಯಧ್ಯಕ್ಷರಾದ ಶಂಕರ್ ಶಟ್ಟಿ, ರಾಜ್ಯ ಉಪಾಧ್ಯಕ್ಷರಾದ ಎಂ . ನಂದೀಶ್, ನಗರ ಉಪಾಧ್ಯಕ್ಷರಾದ ಅಭಿಷೇಕ , ನಗರ ಕಾರ್ಯದರ್ಶಿ ಸ್ಯಾಮ್, ಮಹಿಳಾ ಸಂಘಟಕ ಕಾರ್ಯದರ್ಶಿ ರಂಜಿತಾ, ಯಲಹಂಕ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಹರ್ಷಗೌಡ, ಮಹಾಲಕ್ಷ್ಮಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.