ರಿಲಾಯನ್ಸ್ ಇಂಡಸ್ಟ್ರಿಯ ಟೆಲಿಕಾಂ ಸಂಸ್ಥೆ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಫ್ರೀಡಂ ಪ್ಲಾನ್ ಪ್ರಕಟಿಸಿದೆ. ವಿಶೇಷ ಅಂದರೆ 127 ರೂ.ನಿಂದ ಆರಂಭವಾಗಲಿದ್ದು, ಪ್ರತಿದಿನ ಡಾಟಾ ಬಳಕೆಗೆ ನಿರ್ಬಂಧ ಇನ್ನು ಮುಂದೆ ಇರುವುದಿಲ್ಲ!
ಜಿಯೋ ಪ್ರಕಟಿಸಿರುವ ಹೊಸ ಯೋಜನೆ ಪ್ರಕಾರ 127 ರೂ. ರಿಚಾರ್ಜ್ ಮಾಡಿಸಿದರೆ 15 ದಿನಗಳಲ್ಲಿ 12 ಜಿಬಿ ಡಾಟಾ ಸೌಲಭ್ಯ ದೊರೆಯಲಿದ್ದು, 247 ರೂ.ಗೆ 30 ದಿನಗಳಲ್ಲಿ 25 ಜಿಬಿ ಡಾಟಾ, 447 ರೂ.ಗೆ 60 ದಿನಗಳಿಗೆ 50ಜಿಬಿ ಡಾಟಾ, 597 ರೂ.ಗೆ 90 ದಿನಗಳಲ್ಲಿ 75 ಜಿಬಿ ಡಾಟಾ, 2397 ರೂ.ಗೆ 365 ದಿನ, 365ಜಿಬಿ ಡಾಟಾ ಲಭಿಸಲಿದೆ. ಯಾವುದೇ ಪ್ರಿಪ್ಲಾನ್ ಯೋಜನೆ ಪಡೆದರೂ ಜಿಯೊ ಸಿನಿಮಾ, ಜಿಯೋ ಟಿವಿ ಮತ್ತು ಜಿಯೊ ನ್ಯೂಸ್ ಸೇವೆಗಳನ್ನು ಪಡೆಯಬಹುದಾಗಿದೆ.