ಕೈಕಂಬ ಟಾಯ್ಲೆಟ್ ಒಳಗಡೆ ‘ಶ್ವಾನ-ಚಿರತೆ’ ಬಂಧಿ..!

ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಟಾಯ್ಲೆಟ್ ಒಳಗಡೆ ಚಿರತೆ ಮತ್ತು ನಾಯಿ ಬಂಧಿಯಾದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಸಮೀಪದ ಕೈಕಂಬ ಜಯಲಕ್ಷ್ಮಿ ಎಂಬವರ ಮನೆಯ ನಾಯಿಯನ್ನು ಹಿಡಿಯಲು ಚಿರತೆ ಓಡಿಸಿಕೊಂಡು ಬಂದಿತ್ತು. ಆದ್ರೆ ಚಿರತೆಯನ್ನು ಕಂಡು ಹೆದರಿ ಓಡಿದ ನಾಯಿ ಜೊತೆ ಟಾಯ್ಲೆಟ್ ಒಳಗಡೆ ಚಿರತೆ ನುಗ್ಗಿದೆ.
ಚಿರತೆಯನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿ ಚಿರತೆ ಮತ್ತು ನಾಯಿ ಟಾಯ್ಲೆಟ್ ಒಳಗಡೆ ಬಂಧಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಚಿರತೆಗೆ ಅರಿವಳಿಕೆ ಮದ್ಧು ನೀಡಿ ಚಿರತೆಯನ್ನು ಹಿಡಿಯಲು ಪ್ರಯತ್ನ ನಡೆಸಿದರು.ಇನ್ನು ಘಟನಾ ಸ್ಥಳಕ್ಕೆ ಸಾರ್ವಜನಿಕರು ತಂಡೋಪತಂಡವಾಗಿ ಸ್ಥಳಕ್ಕೆ ಜಮಾಯಿಸಿದ್ದಾರೆ.
“ಚಿರತೆಯನ್ನು ಕೆರಳಿಸದಂತೆ” ಅರಣ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಕಡಬ ಪೊಲೀಸ್ ಅಧಿಕಾರಿಗಳು ಆಗಮಿಸಿ ಚಿರತೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.