ಐದು ವರ್ಷದ ಬಾಲಕನಿಗೆ ಕಲಬುರಗಿಯ ಕಾಳಗಿಯ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಐದು ವರ್ಷದ ನೀಲಕಂಠಯ್ಯಸ್ವಾಮಿ ಹಿರೇಮಠನನ್ನು ಮಂಗಳವಾರ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಕಳೆದ ಸೋಮವಾರ ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಹೃದಯಾಘಾತದಿಂದ ಲಿಂಗ್ಯಕ್ಯರಾಗಿದ್ದರು. ಆ ಹಿನ್ನೆಲೆಯಲ್ಲಿ ಬಾಲಕನಿಗೆ ಮಠದ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ.
ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತರಾಧಿಕಾರಿ ಪಟ್ಟದ ಪ್ರಕ್ರಿಯೆ ನಡೆದಿದ್ದು, ಲಿಂಗೈಕ್ಯರಾಗಿರೋ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರನ ಪುತ್ರನಿಗೆ ಉತ್ತರಾಧಿಕಾರಿ ಪಟ್ಟ ನೀಡಲಾಗಿದೆ.
ಮಠದ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಮಠದ ಉತ್ತರಾಧಿಕಾರಿ ಮಾಡಿರುವುದಾಗಿ ಸ್ವಾಮೀಜಿಗಳು ಹೇಳಿದ್ದಾರೆ.