ಕಾಂಚಾನ-3 ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ರಷ್ಯಾ ಮೂಲದ ನಟಿ ಅಲೆಗ್ಸಾಂಡ್ರಾ ಜಾವು ಅವರ ಶವ ಗೋವಾದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಲೆಗ್ಸಾಂಡ್ರಾ ಜಾವು ಶವಪತ್ತೆಯಾಗಿದ್ದು, ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ ಮೂಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಬಾಯ್ ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದ ನಟಿ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.
ಮನೆಯ ಒಳಗೆ ಲಾಕ್ ಮಾಡಿಕೊಳ್ಳಲಾಗಿದ್ದು, ಹೊರಗಿನಿಂದ ಯಾವುದೇ ವ್ಯಕ್ತಿ ಪ್ರವೇಶಿಸಿರುವ ಸಾಧ್ಯತೆ ಕಡಿಮೆ ಇದೆ. 2019ರಲ್ಲಿ ಫೋಟೋಗ್ರಾಫರ್ ವೊಬ್ಬ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ನಟಿ ಆರೋಪಿಸಿದ್ದರು.