ಸ್ಟಾರ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ನಿಷೇಧಿತ ಮಾದಕದ್ರವ್ಯ ಸೇವಿಸಿದ್ದು ಎಫ್ ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ದೊರೆತಿದೆ.
ಡ್ರಗ್ಸ್ ಪ್ರಕರಣದಲ್ಲಿ ಇದುವರೆಗೆ ಬಂಧಿಸಲಾದ ಎಲ್ಲಾ ಆರೋಪಿಗಳೂ ಡ್ರಗ್ಸ್ ಸೇವಿಸಿರುವುದು ಮತ್ತು ತರಿಸಿಕೊಂಡಿರುವುದು ವಿಚಾರಣೆ ವೇಳೆ ದೃಢಪಟ್ಟಿದೆ.
ಡ್ರಗ್ಸ್ ತರಿಸಿಕೊಂಡಿರುವುದಕ್ಕೆ ವಾಟ್ಸಪ್ ಕಾಲ್, ವಿಡಿಯೋ ಕಾಲ್, ಚಾಟಿಂಗ್ ನಲ್ಲಿ ದೃಢಪಟ್ಟಿದೆ. ಡ್ರೈವರ್ ಗಳ ಮೂಲಕ ತರಿಸಿಕೊಳ್ಳಲಾಗಿದ್ದು, ಕೂದಲು ಸ್ಯಾಂಪಲ್ ಪರೀಕ್ಷೆಯಲ್ಲೂ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡಿದ್ದರೆ ಹೆಚ್ಚು ಶಿಕ್ಷೆ ಆಗುತ್ತೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಸಾಕ್ಷ್ಯಧಾರಗಳನ್ನು ಓದಗಿಸಲಾಗುತ್ತೆ. ಶಿಕ್ಷೆಯ ಬಗ್ಗೆ ನ್ಯಾಯಾಧೀಶರು ತೀರ್ಮಾನ ಮಾಡುತ್ತಾರೆ. ಅಲ್ಲದೇ ಡ್ರಗ್ಸ್ ತರಿಸಿಕೊಂಡಿದ್ದು ಸಾಬೀತು ಆಗಿದ್ದರೂ ಮಾರಾಟ ಮಾಡಿದ್ದರೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.