ಇತ್ತೀಚೆಗಷ್ಟೇ ಅಪಘಾತದಲ್ಲಿ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರನ್ನು ಮರೆತು ಶ್ರದ್ಧಾಂಜಲಿ ಸಭೆ ನಡೆಸುವ ಮೂಲಕ ಫಿಲ್ಮ್ ಚೇಂಬರ್ ಅಪಮಾನಿಸಿರುವುದು ಅಭಿಮಾನಿಗಳನ್ನು ಕೆರಳಿಸಿದೆ.
ಗುರುವಾರ ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಅಗಲಿದ ಚಿತ್ರರಂಗದ ಗಣ್ಯರನ್ನು ನೆನಪಿಸಿಕೊಳ್ಳಲು ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿತ್ತು. ಆದರೆ ಈ ಸಭೆಯಲ್ಲಿ ಅದ್ಭುತ ನಟ ಹಾಗೂ ಮಾನವೀಯ ಗುಣಗಳ ಮೂಲಕ ಗುರುತಿಸಿಕೊಂಡಿದ್ದ ಸಂಚಾರಿ ವಿಜಯ್ ಫೋಟೊ ಇಟ್ಟಿರಲಿಲ್ಲ. ಅಲ್ಲದೇ ಅವರನ್ನು ಕನಿಷ್ಠ ನೆನಪಿಸಿಕೊಳ್ಳಲಿ ಎಂಬ ದೂರುಗಳು ಕೇಳಿ ಬಂದಿವೆ.
ಕಳೆದ ಎರಡು ತಿಂಗಳಲ್ಲಿ ಕನ್ನಡ ಚಿತ್ರರಂಗ 47 ಜನರನ್ನು ಕಳೆದುಕೊಂಡಿದೆ. ನಿಧನರಾದ ಚಿತ್ರರಂಗದ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಆದರೆ ಈ ಶ್ರದ್ಧಾಂಜಲಿ ಸಭೆಯಲ್ಲಿ ವಿಜಯ್ ಅವರನ್ನ ಕಡೆಣಿಸಲಾಗಿದೆ. ವಿಜಯ್ ರ ಫೋಟೋ ಹಾಕದೇ, ಹೆಸರೂ ಹೇಳದೆ ಶ್ರದ್ದಾಂಜಲಿ ಸಲ್ಲಿಸಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡದಿದದು, ಆಕ್ರೋಶ ವ್ಯಕ್ತವಾಗಿದೆ. ವಿಜಯ್ ಆಪ್ತ ಸ್ನೇಹಿತ ಚಂದ್ರಚೂಡ್ ಸಹ ಈ ಘಟನೆ ವಿರೋಧಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.