ಬೆಂಗಳೂರು: ಕೊರೊನಾ ನಿಯಂತ್ರಣದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿದೆ. ರಾಜ್ಯದ 12 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಡಿ ಚನ್ನಣ್ಣನವರ್ ಸೇರಿದಂತೆ ಅನೇಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು :
ರವಿ ಡಿ ಚನ್ನಣ್ಣನವರ್ – ಬೆಂಗಳೂರು ಸಿಐಡಿ ಎಸ್ಪಿ
ಆರ್ ಚೇತನ – ಮೈಸೂರು ಎಸ್ಪಿ
ಸಿ ಬಿ ರಿಷ್ಯಂತ – ದಾವಣೆಗೆರೆ ಎಸ್ಪಿ
ಕೋನವಂಶಿ ಕೃಷ್ಣ – ಬೆಂಗಳೂರು ಗ್ರಾಮಾಂತರ ಎಸ್ಪಿ
ಅಡ್ಡೂರು ಶ್ರಿನಿವಾಸಲು – ಡಿಸಿಪಿ, ಕಲಬುರ್ಗಿ ಕಾನೂನು ಸುವಸ್ಥೆ
ಪ್ರದೀಪ್ ಗುಂಟಿ – ಡಿಸಿಪಿ, ಮೈಸೂರು ಕಾನೂನು ಸುವ್ಯಸ್ಥೆ
ಡೆಕ್ಕ ಕಿಶೋರ್ ಬಾಬು – ಕೋಲಾರ ಎಸ್ಪಿ
ಪ್ರಕಾಶ್ ಗೌಡ, ಐಎಸ್ಡಿ ಎಸ್ಪಿ, ಬೆಂಗಳೂರು
ರಾಹುಲ್ ಕುಮಾರ್ – ತುಮಕೂರು ಎಸ್ಪಿ
ಕೆ ಜಿ ದೇವರಾಜ್ – ಸಿಐಡಿ ಎಸ್ಪಿ
ಹನುಂತರಾಯಪ್ಪ – ಹಾವೇರಿ ಎಸ್ಪಿ
ಕಾರ್ತಿಕ್ ರೆಡ್ಡಿ – ಬೆಂಗಳೂರು ವೈರ್ಲೆಸ್ ಎಸ್ಪಿ