ಬಾಯಿಗೆ ಬಂದಂತೆ ಮಾತನಾಡಿ ಸದಾ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿಕೊಳ್ಳುವ ಬಿಜೆಪಿಯ ಹಿರಿಯ ನಾಯಕ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅಶ್ಲೀಲವಾಗಿ ಮಾತನಾಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಈಶ್ವರಪ್ಪ ಜೋಕರ್ ಎಂದು ಹೆಸರು ಬದಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿಕೆಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಯಾರೋ ಕುಡುಕ ಸೂ…. ಮಕ್ಕಳು ಹೇಳ್ತಾರೆ ಎಂದು ಹೇಳಿದರು. ಮಾತಿನ ಬರದಲ್ಲಿ ಅವಾಚ್ಯ ಶಬ್ದ ಬಳಸಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಕೆಎಸ್ ಈಶ್ವರಪ್ಪ, ಅದು ಕೋಪದಲ್ಲಿ ಬಂತು, ಆ ಮಾತನ್ನ ವಾಪಸ್ ಪಡೆಯುತ್ತೇನೆ ಎಂದರು.
ದಯವಿಟ್ಟು ಅದನ್ನ ಮುಂದುವರೆಸುವುದು ಬೇಡ. ಆ ಮಾತನ್ನ ಹಿಂದೆ ಪಡೆಯುತ್ತೇನೆ. ಅದನ್ನ ಮಾಧ್ಯಮಗಳಲ್ಲಿ ಹಾಕಬೇಡಿ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗೋ ವಿಚಾರದಲ್ಲಿ ಸಾಕಷ್ಟು ಕೇಸ್‌ಗಳು ಹಾಕಿದ್ದರು. ದಕ್ಷಿಣ ಕನ್ನಡದಲ್ಲಿ ಬೆಳಗಿನ ಜಾವ ಕರುಗಳನ್ನ ಕಳ್ಳತನ ಮಾಡ್ತಿದ್ದರು. ಅದನ್ನ ಮಹಿಳೆಯರು ಪ್ರಶ್ನೆ ಮಾಡಿದರೆ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋಮುವಾದಿಗಳನ್ನ ಮಟ್ಟ ಹಾಕ್ತೀನಿ ಅಂತಾ ಹೇಳಿದ್ದರು. ಹಲವು ಸುಳ್ಳು ಕೇಸ್‌ಗಳನ್ನ ಹಾಕಿದರು ಎಂದರು.