ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಅಕ್ರಮವಾಗಿ ಮೈನಿಂಗ್ ಮಾಡುವ ಮೂಲಕ ಚಿನ್ನ ಹೊರತೆಗೆಯುವ ಕಥೆ ಹೊಂದಿದೆ.
ಇದೊಂದು ಕಾಲ್ಪನಿಕ ಸ್ಟೋರಿ. ಆದರೆ, ಛತ್ತೀಸಗಢದ ಕೊರ್ಬಾದಲ್ಲಿರುವ ಬೃಹತ್ ಕಲ್ಲಿದ್ದಲು ಗಣಿಯಲ್ಲಿ ಸಂಚಲನ ಮೂಡಿಸುವ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ. ಇದನ್ನ ಕೆಜಿಎಫ್ ಭಾಗ 3 ಹಗರಣ ಎಂದು ಕರೆಯಲಾಗ್ತಿದೆ. ಏಷ್ಯಾದ ಅತಿದೊಡ್ಡ ಕಲ್ಲಿದ್ದಲು ಗಣಿಯಾಗಿರುವ ಛತ್ತೀಸಗಢದ ಕೊರ್ಬಾದಲ್ಲಿರುವ ಗೆವ್ರಾ ಮೈನ್ಸ್ನ ದೃಶ್ಯ ಇದಾಗಿದೆ ಎಂದು ಹೇಳಲಾಗ್ತಿದೆ.
ಸಾವಿರಾರು ಕಾರ್ಮಿಕರು, ನೂರಾರು ವಾಹನಗಳಲ್ಲಿ ಅಕ್ರಮವಾಗಿ ಕಲ್ಲಿದ್ದಲು ಕದಿಯುವ ಕೆಲಸ ಮಾಡ್ತಿದ್ದಾರೆ. ಈ ಕಳ್ಳತನದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದನ್ನ ಕೆಜಿಎಫ್ ಭಾಗ 3 ಹಗರಣ ಎಂದು ಕರೆಯಲಾಗ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಲಾಸ್ಪುರ ಐಜಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಯಾವ ಗಣಿಗೆ ಸಂಬಂಧಿಸಿದ್ದು, ಇಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದ್ರೂ, ಇಷ್ಟೊಂದು ಸಂಖ್ಯೆಯಲ್ಲಿ ಜನರು ಗಣಿಯೊಳಗೆ ನುಗ್ಗಿರುವುದು ಹೇಗೆ? ಎಂಬೆಲ್ಲ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ :- ಶ್ರೀಲಂಕಾದಲ್ಲಿ ಪರಿಸ್ಥಿತಿ ಅಧೋಗತಿ – ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳು ಬಂದ್