ಸಂಕ್ರಾಂತಿಗೂ ಮುನ್ನ ದೇಶದಲ್ಲಿ ದೊಡ್ಡ ಅನಾಹುತ ಸಂಭವಿಸಲಿದೆ ಎಂದು ಕೋಡಿಹಳ್ಳಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಾವು ಹಿಂದೆ ಹೇಳಿದ್ದ ಭವಿಷ್ಯವನ್ನು ಪುನರುಚ್ಚರಿಸಿದ್ದಾರೆ.
ಕೋಲಾರಕ್ಕೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ದೇವಾಲಯ ಉರುಳುವುದು ರಾಜ್ಯದಲ್ಲಿ ರಾಜ್ಯ ಸರಿಯಿಲ್ಲದೇ ಇದ್ದಾಗ ಸಂಭವಿಸುತ್ತವೆ. ಈ ಹಿಂದೆ ರಾಜರೇ ಕಟ್ಟಿದ್ದನ್ನು ರಾಜರೇ ಒಡೆಯುತ್ತಾರೆ ಎಂದಿದ್ದೆ ಎಂದರು.
ರಾಜ್ಯದಲ್ಲಿ ಸರ್ಕಾರ ಸ್ಥಿರವಾಗಿದೆ, ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಇದಕ್ಕೆ ಸರ್ಕಾರ ನಡೆಸುತ್ತಿರುವುದು ಸೂತ್ರದಾರರು. ಪಟ ಹಳೆಯದಾಗಿದೆ ಆದ್ದರಿಂದ ಸೂತ್ರದಾರರು ಸರ್ಕಾರ ನಡೆಸುತ್ತಿದ್ದಾರೆ. ಅವರಿಂದಲೇ ಎಲ್ಲವೂ ನಿರ್ಣಯವಾಗುತ್ತಿದೆ ಎಂದು ಅವರು ಹೇಳಿದರು.