ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮರಿನಾಯಕನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತ ಮಾಸುವ ಮುನ್ನವೇ ಕೋಲಾರದಲ್ಲಿ ಸರಣಿ ಅಫಘಾತಕ್ಕೆ ತಂದೆ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೋಲಾರ ತಾಲ್ಲೂಕಿನ ಚಿಂತಾಮಣಿ ರಸ್ತೆಯ ಶೆಟ್ಟಿ ಮಾದಮಂಗಳ ಗೇಟ್ ಬಳಿ ಟಾಟಾ ಏಸ್ ವಾಹನ, ಕೆ.ಎಸ್ .ಆರ್.ಟಿಸಿ ಬಸ್ ಹಾಗು ಬೈಕ್ ನಡುವೆ ಈ ದುರ್ಘಟನೆ ನಡೆದಿದ್ದು, ಟಾಟಾ ಎಸ್ ವಾಹನಕ್ಕೆ ಡಿಕ್ಕಿಹೊಡೆದ ಕೆಎಸ್.ಆರ್.ಟಿಸಿ ಬಸ್ ಎದುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾನಹಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನ ಚಾಲಕ ಸೇರಿದಂತೆ ಘಟನೆಯಲ್ಲಿ ನಾಲ್ಕು ಮಂದಿಗೆ ಗಂಬೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ತ್ರತ್ರೆಗೆ ದಾಖಲು ಪಡಿಸಲಾಗಿದೆ.
ಘಟನೆಯಲ್ಕಿ ಮೃತ ಪಟ್ಟವರ ಹೆಸರು ಮತ್ತು ವಿಳಾಸ ತಿಳಿದು ಬರಬೇಕಿದ್ದು ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಟಾ ಎಸ್ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ದುರ್ಘಟನೆ ನಡೆದಿರಬಹುದು ಎಂದು ಸ್ಥಳಿಯರು ಅಂದಾಜಿಸಲಾಗಿದೆ.