ರುಬ್ಬು ಗುಂಡು ಎತ್ತಿ ಹಾಕಿ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸ ಪುರದ ಅಂಬೇಡ್ಕರ್ ಪಾಳ್ಯದಲ್ಲಿ ತಡ ರಾತ್ರಿ ನಡೆದಿದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಪಾಳ್ಯದ ನಿವಾಸಿ ವೆಂಕಟೇಶ್ 65 ಮೃತ ದುರ್ದೈವಿ ನವೀನ್ ಕೊಲೆಗೈದ ಪಾಪಿ.
ಮಗ ಹಾಗೂ ತಂದೆ ನಡುಗೆ ತಡರಾತ್ರಿ ಜಗಳ ಆರಂಭಗೊಂಡಿದ್ದು, ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಮಗ ನವೀನ್ ಮನೆಯಲ್ಲಿದ್ದ ರುಬ್ಬು ಗುಂಡನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನವೀನ್ ನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.