ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ: ಡಿಕೆ ಶಿವಕುಮಾರ್

ತಮಿಳುನಾಡು(ಕೃಷ್ಣಗಿರಿ): ರಮೇಶ್ ಜಾರಕಿಹೊಳಿಯವರು ತೀವ್ರ ಹತಾಶೆಯಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬೇಕು, ಅವರು ಮಾತನಾಡಿದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸಿಡಿ ಯುವತಿಯ ಪೋಷಕರು ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಆ ಯುವತಿಯ ಪರಿಚಯವೂ ಇಲ್ಲ. ಈ ಪ್ರಕರಣಕ್ಕೆ ಸಬಂಧವೂ ಇಲ್ಲ. ಅದು ಅವರ ಸಮಸ್ಯೆ, ಅವರೇ ಪರಿಹರಿಸಿಕೊಳ್ಳಲಿ ಎಂದು ಹೇಳಿದರು.

ಪ್ರಕರಣದ ಕುರಿತು ಎಸ್​​ಐಟಿಯವರು ತನಿಖೆ ಮಾಡುತ್ತಿದ್ದಾರೆ. ನನಗೂ ಇದಕ್ಕೂ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ಸಮಸ್ಯೆ ಅದನ್ನು ಅವರೇ ಸರಿ ಪಡಿಸಿಕೊಳ್ಳಲಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ರಮೇಶ್​ ಜಾರಕಿಹೊಳಿ, ಡಿಕೆ ಶಿವಕುಮಾರ್​ ವಿರುದ್ಧ ದೂರು ಕೊಡುತ್ತೇನೆ. ನನ್ನ ಬಳಿ 11 ದಾಖಲೆ ಇದೆ. ಅದನ್ನು ಎಸ್​ಐಟಿಗೆ ನೀಡುತ್ತೇನೆ. ನರೇಶ್ ಗೌಡನ ಜೊತೆ ಸಂಬಂಧ ಇದೆ ಎಂದು ಆತ ಒಪ್ಪಿಕೊಂಡಿದ್ದಾನೆ‌. ಆತ ಕ್ರಿಮಿನಲ್​ ಮೈಂಡೆಡ್​. ನಿನ್ನೆ ಆಡಿಯೋ ಬಿಡುಗಡೆಯಾಗುತ್ತಿದ್ದಂತೆ ಇಂದು ಆತ ಹೇಳಿಕೆಯನ್ನೇ ತಿರುಚಿದ್ದಾನೆ. ಹಾಗಾಗಿ ನಾನು ಈಗ ಯಾವುದೇ ಸಾಕ್ಷ್ಯವನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಎಸ್​ಐಟಿಗೆ ನೀಡುತ್ತೇನೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!