ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೋಟೆಲ್ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ ಎಂದು ಕುಮಾರಸ್ವಾಮಿ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಸಿ.ಪಿ. ಯೋಗೇಶ್ವರ್ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದಾಗ ತಾಲೂಕಿಗೆ ಬರಲಿಲ್ಲ. ಆಗ ರಾಸಲೀಲೆ ಮಾಡಿಕೊಂಡಿದ್ದು ಈಗ ಜನರೆದುರು ಬಂದವ್ರೆ. ಹೋಟೆಲ್ನಲ್ಲಿ 14 ತಿಂಗಳು ಇದ್ದರಲ್ಲ, ಹೆಚ್ಡಿಕೆ ಬಗ್ಗೆ ಗೊತ್ತಿದೆ. ಮುಖ್ಯಮಂತ್ರಿ ಆದಾಗ ಹೋಟೆಲ್ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನುಮುಂದೆ ಹೆಚ್ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಹೇಳದೆ ಹೋದರೆ ನಾನೇ ಹೇಳುತ್ತೇನೆ. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ. ನನ್ನ ಬಗ್ಗೆ ಮಾತನಾಡಿದ್ರೆ ಅಡ್ಡಹಾಕಿ ಹಿಡಿದು ಕೇಳುತ್ತೇನೆ. ನಮ್ಮ ಪಾರ್ಟಿಯವರೇ ಅಲ್ಲಲ್ಲಿ ಹೆಚ್ಡಿ ಕುಮಾರಸ್ವಾಮಿಯನ್ನ ಹೊಗಳಿದ್ದಾರೆ. ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಬೆಂಬಲಿಸುತ್ತಿದ್ದಾರೆ ಎಂದೂ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಆರೋಪ ಮಾಡಿದ್ದಾರೆ. ನನ್ನ ಮೇಲೆ ಯಾವುದೇ ಅರೋಪ ಇಲ್ಲ. ಕುಮಾರಸ್ವಾಮಿ ಮೇಲೆ ಆರೋಪ ಇದೆ. ಬಿಡದಿಯಲ್ಲಿ ದಲಿತರ ಜಮೀನು ಹೊಡೆದಿದ್ದಾರೆ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತಾಡು ಅಂತಾ ಕುಮಾರಸ್ವಾಮಿಗೆ ಹೇಳಿದ್ದೇನೆ. ಅಭಿವೃದ್ಧಿ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡಲಿ. ಡಿಕೆ ಬ್ರದರ್ಸ್ ವಿರುದ್ದ ಬೇಕಿದ್ರೆ ಕುಮಾರಸ್ವಾಮಿ ಮಾತನಾಡಲಿ. 2023 ರ ಚುನಾವಣೆಯಲ್ಲಿ ನಾನು ಕುಮಾರಸ್ವಾಮಿ ವಿರುದ್ದ ಇದೇ ಚನ್ನಪಟ್ಟಣದಲ್ಲಿ ಚುನಾವಣೆ ನಿಲ್ತೇನೆ. ಇದು ನನ್ನ ತಾಲ್ಲೂಕು ನನ್ನ ಜನ್ಮ ಭೂಮಿ. ನನ್ನ ಬಗ್ಗೆ ಹಗುರವಾಗಿ ಮಾತಾಡೋದು ಬಿಡಬೇಕು. ನನ್ನ ಬಗ್ಗೆ ಆರೋಪ ಮಾಡೋದು ಬಿಡಬೇಕು ಎಂದು ಕಿಡಿಕಾರಿದ್ದಾರೆ.
0 70 1 minute read