ಕೇಂದ್ರ ಸಂಪುಟ ಪುನರಚನೆ ಖಚಿತವಾಗುತ್ತಿದ್ದಂತೆ ಇಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹೊಸಬರಿಗೆ ದಾರಿ ಮಾಡಿಕೊಟ್ಟಿದ್ದಾರೆ.
ಮಾನವ ಸಂಪನ್ಮೂಲ ಸಚಿವ ಸ್ಥಾನಕ್ಕೆ ಸರಬಾನಂದ ಸೋನುವಾಲ್ ಮತ್ತು ಕಾರ್ಮಿಕ ಖಾತೆಗೆ ಸಂತೋಷ್ ಗಂಗ್ವಾರ್ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರಚನೆ ಇಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಇದರ ಬೆನ್ನಲ್ಲೇ ಅನಾರೋಗ್ಯದ ಕಾರಣವೊಡ್ಡಿ ಸರಬಾನಂದ ಸೋನುವಾಲ್ ಶಿಕ್ಷಣ ಖಾತೆಗೆ ರಾಜೀನಾಮೆ ನೀಡಿರುವುದು ಕೂತಹಲ ಮೂಡಿಸಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ನಾರಾಯಣ್ ರಾಣೆ ಕೇಂದ್ರ ಸಚಿವ ಅಲಂಕರಿಸಲು ಮೊದಲ ಸಾಲಿನಲ್ಲಿದ್ದಾರೆ. ಇದೇ ವೇಳೆ ಮತ್ತಷ್ಟು ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವುದರಿಂದ ತಮ್ಮ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
ದೇಬಶ್ರೀ ಚೌಧರಿ,, ರಾವ್ ಸಾಹೇಬ್ ದಾನ್ವೆ ಮುಂತಾದವರು ರಾಜಿನಾಮೆ ಸಲ್ಲಿಸಿದ್ದಾರೆ.