ದೊಡ್ಡಮಟ್ಟದ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಲಹರಿ ಸಂಸ್ಥೆ. ತೆಲುಗಿನಲ್ಲಿ ಎಲ್ಲರು ಹೆಚ್ಚು ನಿರೀಕ್ಷೆಯಿಂದ ಕಾಯುತ್ತಿರುವ ಆರ್ ಆರ್ ಆರ್ ಸಿನಿಮಾದ ಆಡಿಯೋ ಹಕ್ಕನ್ನ ಲಹರಿ ಸಂಸ್ಥೆ ಖರೀದಿಸಿದೆ.
ಇದು ಮಹತ್ತರ ಸಾಧನೆ ಎಂದೇ ಹೇಳಬಹುದು. ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್, ಜ್ಯೂನಿಯರ್ ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಘಟಾನುಘಟಿ ನಟರು ನಟಿಸುತ್ತಿದ್ದಾರೆ.
ಈ ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದ ಹಾಡಗಳು ಲಹರಿ ತೆಕ್ಕೆಗೆ ಬಂದಿದೆ. ಇನ್ನು ಇತ್ತೀಚೆಗಷ್ಟೇ ಕೆಜಿಎಫ್ 2 ಸಿನಿಮಾದ ಹಾಡುಗಳನ್ನು 6 ಕೋಟಿಗೂ ಹೆಚ್ಚು ಮೊತ್ತ ಕೊಟ್ಟು ಖರೀದಿಸಿ ದಾಖಲೆ ಬರೆದಿತ್ತು. ಇದೀಗ ಮತ್ತೊಂದು ದಾಖಲೆ ಬರೆಯೋಕೆ ರೆಡಿಯಾಗಿದೆ.