ರಾಜೀನಾಮೆ ಕುರಿತು ಹೈಕಮಾಂಡ್ ಸೂಚನೆ ಇನ್ನೂ ಬಂದಿಲ್ಲ. ರಾತ್ರಿವರೆಗೂ ಕಾಯುತ್ತೇನೆ. ನೀವು ನಾಳೆ ಬೆಳಿಗ್ಗೆವರೆಗೂ ಕಾಯಿರಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪ್ರವಾಹ ಪೀಡಿತ ಉತ್ತರ ಕರ್ನಾಟಕದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಭಾನುವಾರ ಸಂಜೆ ಬೆಂಗಳೂರಿಗೆ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಡು ಅಂದರೆ ಕೊಡಲು ಸಿದ್ಧ ಎಂದರು.
ರಾಜೀನಾಮೆ ಕೊಡಲು ಹೈಕಮಾಂಡ್ ಹೇಳಿದರೆ ಕೊಡಲು ಸಿದ್ಧ. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವ ಕೊನೆಯ ನಿಮಿಷದವರೆಗೂ ಕೆಲಸ ಮಾಡುತ್ತೇನೆ. ಸದ್ಯಕ್ಕೆ ಯಾವುದೇ ಸಂದೇಶ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜೀನಾಮೆ ಕೊಡಿ ಅಂದರೂ ಇನ್ನೂ 10ರಿಂದ 15 ವರ್ಷ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇನೆ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.