ರಾಜ್ಯದಲ್ಲಿ ಜೂನ್ 14ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 500 ಕೋಟಿ ರೂ. ಮೌಲ್ಯದ ಪ್ಯಾಕೇಜ್ ಘೋಷಿಸಿದರು.
ಗುರುವಾರ ನಿರೀಕ್ಷೆಯಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಸಂಘಟಿತ ವಲಯಗಳ ಕಾರ್ಮಿಕರಿಗೆ ಆರ್ಥಿಕ ನೆರವು ಪ್ರಕಟಿಸಿದರು. ಪ್ಯಾಕೇಜ್ ನ ಬಹುತೇಕ ಭಾಗ ಗ್ರಾಮೀಣ ಭಾಗಕ್ಕೆ ತಲುಪಲಿದ್ದು, ಒಂದು ವಾರದಲ್ಲಿ ಪರಿಹಾರ ಮೊತ್ತ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
- ಚಲನಚಿತ್ರ ಮತ್ತು ದೂರದರ್ಶನ ದಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ 3 ಸಾವಿರ
- ಪವರ್ ಲೂಮ್ ನೌಕರರಿಗೆ 3000ರೂ.
- ಆಶಾ ಕಾರ್ಯಕರ್ತಯರಿಗೆ 3000 ರೂ.
- ಆರ್ಚಕರು ಮತ್ತು ಅಡುಗೆ ಕೆಲಸಗಾರರಿಗೆ ಸಿ ಗ್ರೂಪ್ ನೌಕರರಿಗೆ 3 ಸಾವಿರ ರೂ.
- ಮೀನುಗಾರರಿಗೆ 3 ಸಾವಿರ ರೂ.
- ಸಿನಿಮಾ ರಂಗದವರಿಗೆ 3 ಸಾವಿರ ರೂ.
- ಅಂಗನವಾಡಿ ಸಹಾಯಕರಿಗೆ ತಲಾ ೨ ಸಾವಿರ ರೂ.
- ಮಸೀದಿಯ ರೇಷಿಮಾ ಅಂಡ್ ಪೌಜಿನ್ ಗೆ ತಲಾ 3 ಸಾವಿರ ರೂ.