ಲಾಕ್ ಡೌನ ಸಮಯ ಸದ್ಬಳಕೆ: ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ ವಿದ್ಯಾರ್ಥಿ
ಆನಂದ ಭಮ್ಮನ್ನವರ ರಾಜ್ ನ್ಯೂಸ್ ಚಿಕ್ಕೋಡಿ
ಚಿಕ್ಕೋಡಿ : ಕೊರೊನ ಹಿನ್ನೆಲೆ ಕಳೆದ ಒಂದು ವರ್ಷದಿಂದ ದೇಶಾದ್ಯಂತ ಶಾಲಾ ಕಾಲೇಜುಗಳು ಬಂದ್ ಆದ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಮೋಜು ಮಸ್ತಿಗೆ ತೊಡಗಿದ್ದವರೆ ಹೆಚ್ಚು .ಆದರೆ ಇಲ್ಲೊಬ್ಬ ವಿದ್ಯಾರ್ಥಿ ಲಾಕ್ ಡೌನ ಸಮಯವನ್ನು ಸದ್ಬಳಕೆ ಮಾಡಿಕೊಂಡು ಎಲೆಕ್ಟ್ರಿಕಲ್ ಬೈಕ್ ತಯಾರಿಸಿ ಸಾಧನೆ ಮೆರೆದಿದ್ದಾನೆ .
ಹೀಗೆ ಸೌಂಡು ಇಲ್ಲಾ,ಹೊಗೆ ಇಲ್ಲದೆ ವಿದ್ಯುತ ಚಾರ್ಜಿಂಗ್ ಬೈಕ ಓಡಿಸುತ್ತಿರುವ ಬಾಲಕನ ಹೆಸರು ಪ್ರಥಮೇಶ ಸುತಾರ.ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿ ನಗರದ ನಿವಾಸಿ .ಹತ್ತನೆ ತರಗತಿ ಓದುತ್ತಿರುವ ಈತ ಕೊರೊನ ಲಾಕ್ ಡೌನ ವೇಳೆ ಸಮಯವನ್ನು ವ್ಯರ್ಥ ಮಾಡದೆ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಚಾರ್ಜಿಂಗ್ ನಿಂದ ಬೈಕ್ ಯೊಂದನ್ನು ಮನೆಯಲ್ಲಿಯೆ ತಯಾರಿಸಿದ್ದಾನೆ.
ಕುಟುಂಬಸ್ಥರ ಸಹಕಾರದಿಂದ ಹಳೆಯ ನಿರುಪಯುಕ್ತ ಬೈಕ್ ಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಅವುಗಳಿಗೆ ಲಿಡ್ ಎಸಿಡ್ ಬ್ಯಾಟರ್ ,48 ವೋಲ್ಟೇಜ್ ಬ್ಯಾಟರಿ,48 ವೋಲ್ಟೇಜ್ ಮೋಟರ್ ,750 ವ್ಯಾಟ್ ಸಾಮಥ್ರ್ಯದ ಮೋಟರ್ ಬಳಕೆ ಮಾಡಿ,ಮೋಟರ್ ಮತ್ತು ಬ್ಯಾಟರಿ ನಿಯಂತ್ರಣ ಯಂತ್ರ ಬಳಸಿ ಇಪತ್ತೈದು ಸಾವಿರ ವೆಚ್ಚದಲ್ಲಿ ಬೈಕ್ ತಯಾರಿಸಿ ಸಾಧನೆ ಮೆರೆದಿದ್ದಾನೆ.ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೇರಾತಾಯಿದೆ.ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.ಈ ಸಂಕಷ್ಟದಿಂದ ಪಾರಾಗಲು ವಿದ್ಯುತ್ ಚಾಲಿತ ಬೈಕಗಳ ಅವಶ್ಯಕತೆಯಿದ್ದು.ಈ ಇಲೆಕ್ಟ್ರಿಕಲ್ ಬೈಕ್ ತಯಾರಿಸಲಾಗಿದೆ ಎನ್ನುತ್ತಾರೆ ಬಾಲಕ ಪ್ರಥಮೇಶ ಸುತಾರ .
ಪ್ರಥಮೇಶ ಸುತಾರ( ಬೈಕ್ ತಯಾರಿಕ)
ಇನ್ನು ಈ ಇಲೆಕ್ಟ್ರಿಕಲ್ ಬೈಕ್ ಒಮ್ಮೆ ಫುಲ್ ಚಾರ್ಜಿಂಗ್ ಮಾಡಿದರೆ ಸುಮಾರು 35 ಕಿ.ಮಿ ಕ್ರಮಿಸುತ್ತದೆ .ಹಾಗೂ ಗಂಟೆಗೆ 40 ಕಿಮಿ ವೇಗದಲ್ಲಿ ಓಡುವ ಈ ಬೈಕ್ ನ ವಿಶೇಷ ಎಂದರೆ ರಿವರ್ಸ್ ಕೂಡ ಚಲಿಸುತ್ತದೆ .
ಪ್ರಥಮೇಶನ ಈ ಸಾಧನೆಗೆ ಕುಟುಂಬಸ್ಥರು ಸಹಕಾರ ನೀಡಿದ್ದು ,ಇವರ ತಂದೆ ಪ್ರಕಾಶ ಸುತಾರ ಕೂಡ ವೃತ್ತಿಯಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಕೊರೊನ ಲಾಕ್ ಡೌನ ವೇಳೆ ತಮ್ಮ ಮಗ ಈ ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ್ದು ,ಮಗನ ಸಾಧನೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ .ಒಟ್ಟಿನಲ್ಲಿ ಕೊರೊನ ಲಾಕ್ ಡೌನ ವೇಳೆ ಸದುಪಯೋಗ ಮಾಡಿಕೊಂಡ ಪ್ರಥಮೇಶ ಇಲೆಕ್ಟ್ರಿಕಲ್ ಬೈಕ್ ತಯಾರಿಸುವ ಮೂಲಕ ಸಾಧನೆ ಮೆರೆದಿದ್ದಾನೆ .