ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೈವ ಯಂಗ್ ಟೈಗರ್ ಜ್ಯೂನಿಯರ್ ಎನ್‍ಟಿಆರ್. ಆಕ್ಷನ್‍ನಲ್ಲಿ ಎತ್ತಿದ ಕೈ, ಡೈಲಾಗ್ ಹೊಡೆಯುವಲ್ಲಿ ತಾತನನ್ನೇ ಮೀರಿಸುವಂತ ನಟ. ಇನ್ನು ಖಾಸಗಿ ಲೈಫ್ ಬಗ್ಗೆ ಹೇಳೋದಾದ್ರೆ, ಟಾಲಿವುಡ್‍ನ ಸೂಪರ್ ಆಕ್ಟರ್. ಕೆರಿಯರ್‍ನಲ್ಲಾಗ್ಲೀ, ಜೀವನದಲ್ಲಾಗ್ಲೀ ಯಾವ್ದಕ್ಕೂ ಕೊರತೆ ಇಲ್ಲ. ಆದ್ರೆ ಅದೇ ಟೆಂಪರ್ ಹುಡುಗನಿಗೆ ಮಾತ್ರ ಎಂದಿಗೂ ಮರೆಯಲಾಗದ ನೋವೊಂದು ಕಾಡ್ತಿದೆ. ಅದೇ ತನ್ನ ಅಪ್ಪ ಹಾಗು ಅಣ್ಣನನ್ನ ಕಳೆದುಕೊಂಡ ನೋವು.

ಜ್ಯೂನಿಯರ್ ಎನ್‍ಟಿಆರ್ ಗೆ ಅಪ್ಪ ಅಂದ್ರೆ ಪ್ರಾಣ, ಆದ್ರೆ ಅದೇ ಪ್ರೀತಿಯ ಅಪ್ಪನನ್ನ ಕಳೆದುಕೊಂಡು, ಅನಾಥ ಮಗುವಂತಾಗಿದ್ದಾರೆ. ಜ್ಯೂನಿಯರ್ ಎನ್‍ಟಿಆರ್ ಎಲ್ಲೇ ಕೂತ್ರೂ, ನಿಂತ್ರೂ ಅಪ್ಪನದ್ದೇ ಧ್ಯಾನ. ಅಪಘಾತದಲ್ಲಿ ಅಪ್ಪ ತೀರಿಕೊಂಡ್ಡಿದನ್ನ ಇಂದಿಗೂ ಮರೆಯೋದಿಕ್ಕೆ ಸಾಧ್ಯವಾಗ್ತಿಲ್ಲಾ. ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಅಪ್ಪ ಬೇಕೆಂದು ಹಠ ಹಿಡಿದು ಬಿಡ್ತಾರೆ, ಅವಾಗೆಲ್ಲಾ ಅವ್ರ ಜೊತೆಯಾಗುವುದೇ ಕಣ್ಣೀರು. ಅಪ್ಪ ಅಷ್ಟೇ ಯಾಕೇ ಅಣ್ಣನನ್ನ ಆಕ್ಸಿಡೆಂಟ್‍ನಲ್ಲಿ ಕಳೆದುಕೊಂಡ ನತದೃಷ್ಠ ತಮ್ಮ.

ಎಲ್ಲಾದ್ರು ಆಕ್ಸಿಡೆಂಟ್ ವಿಚಾರ ಬಂದ್ರೆ ಸಾಕು ತಾರಕ್ ಬೆಚ್ಚಿಬೀಳ್ತಾರೆ. ಅವರ ಅಣ್ಣ ನಂದಮೂರಿ ಜಾನಕಿ ರಾಮ ಹಾಗೂ ತಂದೆ ಹರಿಕೃಷ್ಣನ್ನ ಕಳೆದುಕೊಂಡ ಘಟನೆ ಥಟ್ಟನೆ ಬಂದು ಬಿಡುತ್ತೆ. ಇತ್ತೀಚೆಗೆ ಸೈಬರ್ ಪೊಲೀಸ್ ವಾರ್ಷಿಕ ಸಮಾರಂಭವೊಂದರಲ್ಲಿ ಭಾಗಿಯಾಗಿ, ಜೂನಿಯರ್ ಎನ್‍ಟಿಆರ್ ತಂದೆ ಮತ್ತು ಅಣ್ಣನನ್ನು ನೆನೆದು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಆ ಕರಾಳ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ನಾವೆಲ್ಲಾ ಕೆಲವೊಮ್ಮೆ ಅಜಾಕರಾತೆಯಿಂದ ಗಾಡಿ ಓಡಿಸಿದ್ರು, ಅಪ್ಪ-ಅಣ್ಣ ತುಂಬಾ ಕೇರ್‍ಫುಲ್ ಹಾಗಿಯೇ ಓಡಿಸುತ್ತಿದ್ರು. ಆದ್ರೂ ಅವರಿಬ್ಬರನ್ನು ರಸ್ತೆ ಅಪಘಾತ ಬಲಿ ತೆಗೆದುಕೊಂಡು ಬಿಡ್ತು. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬವಿದೆ. ವಾಹನ ತೆಗೆದುಕೊಂಡು ರಸ್ತೆಗಿಳಿಯುವ ಮುನ್ನ ಎಚ್ಚರ. ಕೊರೊನಾಗೆ ಔಷಧಿ ಇರಬಹುದು, ಆದ್ರೆ ರಸ್ತೆ ಅಪಘಾತದಿಂದ ಸಾಯುವವರಿಗೆ ಮದ್ದು ಇಲ್ಲ ಎಂದು ನೋವನ್ನು ನೆನೆಯುವುದರ ಜೊತೆಗೆ ಬುದ್ಧಿ ಮಾತು ಹೇಳಿದ್ದಾರೆ.