ಪರಿಸರ ಸ್ನೇಹಿ ಹಸಿರು ಇಂಧನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರು ಮೂಲದ ವಿದ್ಯುತ್ ಇವಿ -ಪವರ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ವಿದ್ಯುನ್ಮಾನ ದ್ವಿಚಕ್ರವಾಹನಗಳಿಗೆ ಚಾರ್ಜಿಂಗ್ ಉಪಕರಣಗಳನ್ನು ಉತ್ಪಾದಿಸಿ, ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ವಿದ್ಯುನ್ಮಾನ ವಾಹನಗಳು ಚಾರ್ಜ್ ಮಾಡಿಕೊಳ್ಳಲು ಅನುಕೂಲವಾಗುವಂತೆ ದೇಶ ಮೂಲೆ ಮೂಲೆಗೂ ಕೇವಲ 3500 ರೂಪಾಯಿ ವೆಚ್ಚದಲ್ಲಿ ಚಾರ್ಜಿಂಗ್ ಕೇಂದ್ರ ಆರಂಭಿಸುವ `ವಿ ದುಕಾನ್” ಯೋಜನೆಗೆ ರಾಜ್ಯ ಸರ್ಕಾರದ ಖಜಾನೆ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಚಾಲನೆ ನೀಡಿದರು.
ದೇಶದ ಮೂಲೆ ಮೂಲೆಯಲ್ಲೂ ಚಿಕ್ಕ ಚಿಕ್ಕ ಅಂಗಡಿ ಮಳಿಗೆಗಳಲ್ಲಿ ವಿದ್ಯುನ್ಮಾನ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಕಲ್ಪಿಸುವುದೆ ವಿ ದುಕಾನ್ ಯೋಜನೆಯ ಉದ್ದೇಶವಾಗಿದೆ ಎಂದು ವಿದ್ಯುತ್ ಇವಿ ಪವರ್ ಪ್ರವೈಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ ಚಕ್ರವರ್ತಿ ತಿಳಿಸಿದರು.
ಸಾರಿಗೆ ಕ್ಷೇತ್ರವನ್ನು ಮಾಲಿನ್ಯ ರಹಿತ ಪರಿಸರ ಸ್ನೇಹಿ ಉದ್ಯಮವಾಗಿ ಪರಿವರ್ತಿಸುವ ಗುರಿಹೊಂದಲಾಗಿದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ ಚಕ್ರವರ್ತಿ ಹೇಳಿದರು.
ವಿ ದುಕಾನ್ ಹೆಸರಿನ ವಿನೂತನ ವೈಜ್ಞಾನಿಕ ಯೋಜನೆಯ ಮೂಲಕ ಕೇವಲ 3500 ರೂಪಾಯಿ ಬಂಡವಾಳದಲ್ಲಿ ಚಿಕ್ಕ ಚಿಕ್ಕ ಅಂಗಡಿ ಮಳಿಗೆಯ ಮಾಲಿಕರು ವಿದ್ಯುನ್ಮಾನ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ಸೇವೆ ಆರಂಭಿಸುವ ಮೂಲಕ ಮಾಲಿನ್ಯ ರಹಿತ ಪರಿಸರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವ ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದು ಕಲ್ಯಾಣ ಚಕ್ರವರ್ತಿ ವಿವರಿಸಿದರು.